ಹಾಲಾಡಿ ಹಾಲು ಉತ್ಪಾದಕರ ಸಭೆ

sanmana-2
ಹಾಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸುಬ್ರಾಯ ಮಿತ್ಯಾಂತ ಅವರನ್ನು ಸನ್ಮಾನಿಸಲಾಯಿತು.
Published on

ಜನ್ನಾಡಿ: ಹಾಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್ ದಾಮ್ಲೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ವಿಸ್ತರಣಾಧಿಕಾರಿ ವ್ನಿೇಶ್ ನಾಯಕ್ ಒಕ್ಕೂಟದಿಂದ ದೊರೆಯುವ ಸವಲತ್ತುಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದ್ದು, ಜತೆಗೆ ಸಂಘವು ವಾರ್ಷಿಕವಾಗಿ 2,81,509.88 ರೂ. ನಿವ್ವಳ ಲಾಭ ಗಳಿಸಿದೆ. ಶೇ.65ರಷ್ಟು ಬೋನಸ್ ಹಾಗೂ ಶೇ.15ರಷ್ಟು ಡಿವಿಡೆಂಡ್ ಆಗಿ ನೀಡಲಾಗಿದೆ ಎಂದರು.
27 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸುಬ್ರಾಯ ಮಿತ್ಯಾಂತ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಹಾಲು ಸರಬರಾಜು ಮಾಡಿದವರಿಗೆ ಬಹುಮಾನ ವಿತರಿಸಲಾಯಿತು. ನಿರ್ದೇಶಕ ಕೃಷ್ಣ ಕುಲಾಲ್ ವಂದಿಸಿದರು. ಕಾರ್ಯದರ್ಶಿ ನಾಗೇಶ ನಾಯ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net