ನೆರೆಪೀಡಿತ ಪ್ರದೇಶ ಪರಿಶೀಲನೆ

visit
ವಾರಾಹಿ ಯೋಜನೆಯ ಇಂಜಿನಿಯರ್ ತಂಡ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿತು
Published on

ಕೋಟ: ನೆರೆಪೀಡಿತ ಪ್ರದೇಶಕ್ಕೆ ವಾರಾಹಿ ಯೋಜನೆ ಇಂಜಿನಿಯರ್‌ಗಳ ತಂಡ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ರೈತ ಸಂಘಟನೆ ಪ್ರಮುಖರೊಂದಿಗೆ ಚರ್ಚಿಸಿದ್ದು, ನಾಲ್ಕು ಸೇತುವೆ ನಿರ್ಮಾಣ ಮತ್ತು ಸೂಲಡ್ಪು-ಮಡಿವಾಳ ಸಾಲು ಹೊಳೆ ಹೂಳು ತೆಗೆಯಲು ಸೂಕ್ತ ಯೋಜನಾ ವರದಿ ಬಗ್ಗೆ ಮಾಹಿತಿ ಕಲೆಹಾಕಿತು.

ಈ ಭಾಗದ ಕೃತಕ ನೆರೆ ಸಮಸ್ಯೆಗೆ ವಾರಾಹಿ ನೀರು ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಭಾಗಕ್ಕೆ ಬಿಡುತ್ತಿರುವುದೂ ಒಂದು ಕಾರಣ ಎಂದು ರೈತಧ್ವನಿ ಸಂಘಟನೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗುರುವಾರ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೇರೆಪೀಡಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಸಚಿವರು ಸೂಚಿಸಿದ್ದರು.

ರೈತಧ್ವನಿ ಸಂಘಟನೆ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ, ಟಿ.ಮಂಜುನಾಥ್ ಗಿಳಿಯಾರ್, ತಿಮ್ಮ ಕಾಂಚನ್ ಹರ್ತಟ್ಟು, ನಿತ್ಯಾನಂದ ಶೆಟ್ಟಿ, ಮಹಾಬಲ ಪೂಜಾರಿ, ಗಿಳಿಯಾರು ಪ್ರಸಾದ್ ಶೆಟ್ಟಿ, ಮಣೂರು ಮಹೇಶ್ ಶೆಟ್ಟಿ, ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಕುಲದೀಪ ಸುಭಾಸ್ ಶೆಟ್ಟಿ, ಹರ್ತಟ್ಟು ಬಾಬು ಶೆಟ್ಟಿ, ಗಿಳಿಯಾರು ಶ್ರವಣ್ ಕುಮಾರ್ ಶೆಟ್ಟಿ, ನಾಗಾರಾಜ ಗಾಣಿಗ ಸಾಲಿಗ್ರಾಮ, ಆನಂದ ಗಿಳಿಯಾರು, ಕೀರ್ತೀಶ್ ಪೂಜಾರಿ ಮತ್ತು ಸಹಕಾರಿ ದುರೀಣ ಗಿಳಿಯಾರು ತಿಮ್ಮ ಪೂಜಾರಿ, ಉದ್ಯಮಿ ಮಹೇಶ್ ಹೆಗ್ಡೆ ಮೊಳಹಳ್ಳಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net