ಸ್ವಾತಂತ್ರೃ ಹೋರಾಟಗಾರರ ಮನೆ ನಾಮಫಲಕ ಅನಾವರಣ

namapalaka
ಬಡಾ ಎರ್ಮಾಳಿನಲ್ಲಿ ನಡೆದ ಸ್ವಾತಂತ್ರೃ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಡಾ.ವೈ.ಎನ್. ಶೆಟ್ಟಿ ಮಾತನಾಡಿದರು
Published on

ಪಡುಬಿದ್ರಿ: ಸ್ವರಾಜ್ಯ 75 ತಂಡ, ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ವಕ್ವಾಡಿ ಹಸ್ತ ಚಿತ್ರ ಫೌಂಡೇಶನ್ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ, ಎರ್ಮಾಳ್ ಬಡಾ ಮೊಗವೀರ ಸಭಾ ಸಂಘಟನೆ ಸಹಯೋಗದಲ್ಲಿ ಸ್ವಾತಂತ್ರೃ ಹೋರಾಟಗಾರ ಬಡಾ ಗ್ರಾಪಂ ವ್ಯಾಪ್ತಿಯ ಎರ್ಮಾಳ್ ರಾಮಪ್ಪ ಜಿ.ಸಾಲ್ಯಾನ್ ಮನೆಗೆ ಸ್ವಾತಂತ್ರೃ ಹೋರಾಟಗಾರರ ಮನೆ ನಾಮಫಲಕವನ್ನು ಗುರುವಾರ ಅನಾವರಣ ಮಾಡಲಾಯಿತು.

ಚೇತನ್ ಶೆಟ್ಟಿ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಆಯುರ್ವೇದ ವೈದ್ಯ ಡಾ.ವೈ.ಎನ್.ಶೆಟ್ಟಿ ನಾಮಫಲಕ ಅನಾವರಣ ಮಾಡಿದರು. ಭಾರತ ಸ್ವಾತಂತ್ರೃ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ಎರ್ಮಾಳ್ ರಾಮಪ್ಪ ಜಿ.ಸಾಲ್ಯಾನರ ಸ್ವಾತಂತ್ರೃ ಹೋರಾಟದ ವಿಚಾರವನ್ನು ಕವಿತಾ ಆಚಾರ್ಯ ಮುದೂರು ಪ್ರಸ್ತುತ ಪಡಿಸಿದರು. ಪುಂಡಲೀಕ ಮರಾಠೆ, ಸಂಜೀವ ನಾಯಕ್, ಜಯಶಂಕರ ಕಂಗಣ್ಣಾರು, ಲಕ್ಷ್ಮಣ ಸುವರ್ಣ, ಶಾರದಾ ಎರ್ಮಾಳ್ ವಿಚಾರ ಹಂಚಿಕೊಂಡರು.

ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ದೇವಿಪ್ರಸಾದ್ ಬೆಳ್ಳಿಬೆಟ್ಟು, ಕೇಶವ ಮೊಯ್ಲಿ, ಬಾಬುರಾಯ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೀಷ್ ಸ್ವಾಗತಿಸಿ, ಪ್ರೀಶ ಕಾರ್ಯಕ್ರಮ ನಿರೂಪಿಸಿದರು, ಹರ್ಷಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net