ಕೋವಿಡ್​ನ ಈ ಹೊಸ ವೈರಸ್ ಇನ್ನೂ ಅಪಾಯಕಾರಿ; ಇದು ರೂಪಾಂತರಿಯ ರೂಪಾಂತರಿ!

mutation
Published on

ನವದೆಹಲಿ: ಇನ್ನೇನು ಕರೊನಾದ ಅಬ್ಬರ ತಗ್ಗಿತು ಎಂದಾಗಲೆಲ್ಲ ಕೋವಿಡ್-19 ವೈರಸ್​ ಕುರಿತ ಮತ್ತಷ್ಟು ಆತಂಕಕಾರಿ ಸುದ್ದಿ ಮುನ್ನಲೆಗೆ ಬರುತ್ತಿರುವುದು ಈಗಾಗಲೇ ನಡೆದಿದೆ. ಇದೀಗ ಅಂಥದ್ದೇ ಒಂದು ವಿಚಾರ ಹೊರಬಿದ್ದಿದ್ದು, ಕರೊನಾ ಕುರಿತ ಆತಂಕ ಹೆಚ್ಚಿಸುವಂಥ ವಿಷಯವೊಂದು ಬಹಿರಂಗಗೊಂಡಿದೆ.

ಕರೊನಾ ಹಾವಳಿ ಇನ್ನೇನು ಕಡಿಮೆಯಾಯಿತು ಎಂಬಷ್ಟರಲ್ಲಿಯೇ ಬ್ರಿಟನ್​ನಲ್ಲಿ ಕರೊನಾದ ರೂಪಾಂತರಗೊಂಡ ವೈರಸ್ ಪತ್ತೆಯಾಗಿತ್ತು. ಮಾತ್ರವಲ್ಲ, ರೂಪಾಂತರಗೊಂಡ ಈ ವೈರಸ್​ ಹೆಚ್ಚು ವೇಗವಾಗಿ ಹಬ್ಬಲಿದ್ದು, ಅಧಿಕ ಸೋಂಕನ್ನು ಹೊಂದಿದೆ ಎಂದೂ ಹೇಳಲಾಗಿತ್ತು. ಅಲ್ಲದೆ ಬ್ರಿಟನ್​ನಿಂದ ಭಾರತಕ್ಕೆ ಮರಳಿದವರಲ್ಲೂ ಈ ರೂಪಾಂತರಿ ವೈರಸ್ ಪತ್ತೆಯಾಗಿತ್ತು.

ಆದರೆ ಇದೀಗ ಈ ರೂಪಾಂತರಿಯ ವೈರಸ್​ ಕೂಡ ರೂಪಾಂತರಗೊಂಡಿದ್ದು, ಈ ಹಿಂದಿನದ್ದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ವಿಷಯ ಹೊರಬಿದ್ದಿದೆ. ಇ484ಕೆ ಎನ್ನಲಾದ ಈ ರೂಪಾಂತರಕ್ಕೊಳಗಾಗಿರುವ ವೈರಸ್​ ಬ್ರಿಟನ್​ನಲ್ಲಿ ಪತ್ತೆಯಾಗಿದೆ. ದಕ್ಷಿಣ ಆಫ್ರಿಕ, ಬ್ರೆಜಿಲ್​ಗಳಲ್ಲಿ ಈ ಹೊಸ ವೈರಸ್​ ಈಗಾಗಲೇ ಕಾಣಿಸಿಕೊಂಡಿದೆ. ಸೋಂಕು ವ್ಯಾಪಿಸುವಲ್ಲಿ ಈ ಹಿಂದಿನ ವೈರಸ್​ಗಳಿಗಿಂತ ಇದು ಹೆಚ್ಚು ತೀವ್ರವಾಗಿರುವುದರಿಂದ, ಇದೇನಾದರೂ ಜಗತ್ತಿನಾದ್ಯಂತ ವ್ಯಾಪಿಸಿದರೆ ಹೆಚ್ಚಿನ ಅಪಾಯ ಸಂಭವಿಸಲಿದೆ ಎಂದು ವೈರಸ್ ಎಕ್ಸ್​ಪರ್ಟ್ ಡಾ.ಜುಲಿಯನ್ ಟಾಂಗ್ ಬಿಬಿಸಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net