ರಾಯಚೂರು: ಜಿಲ್ಲೆಯು ದೇವದುರ್ಗ ಪಟ್ಟಣದ ಮುಸ್ಲಿಂ(Muslim) ಸಮುದಾಯದ ಬಾಬು ಗೌರಂಪೇಟ ಎಂಬ ಯುವಕ ಗುರುವಾರ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಸುವ ಮೂಲಕ ಹಿಂದೂ–ಮುಸ್ಲಿಂ ನಡುವೆ ಸೌಹಾರ್ದ ಮೆರೆದಿದ್ದಾರೆ.
ಬಾಬು ಅವರು ತಮ್ಮ ವಾರ್ಡ್‌ನ ಗೆಳೆಯರ ಬಳಗದವರೊಂದಿಗೆ 2014ರಿಂದ ಅಯ್ಯಪ್ಪಸ್ವಾಮಿ ಮಾಲೆ ಧರಿಸುತ್ತಿದ್ದಾರೆ. ಈ ಮೂಲಕ ‘ದೇವನೊಬ್ಬ ನಾಮ ಹಲವು’ ಎಂಬ ಸಂದೇಶ ಸಾರುತ್ತಿದ್ದಾರೆ. ಬಾಬು ಅವರು ಪ್ರತಿ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ಎಲ್ಲರೊಡನೆ ಕೂಡಿ ಪಾದಯಾತ್ರೆ ನಡೆಸಿ ಸರದಿಯಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.
ಇದನ್ನೂ ಓದಿ: 7ರಂದು ರಾಜ್ಯ ಮಟ್ಟದ 45ನೇ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ- ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜನೆ
ಕಳೆದ 10 ವರ್ಷಗಳಿಂದ ಮಾಲೆ ಧರಿಸಿ ಅಯ್ಯಪ್ಪನಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಇವರ ಈ ಭಕ್ತಿ ಭಾವದ ಕಾರ್ಯಕ್ಕೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ | Modi