ತಮಿಳುನಾಡು: ಇಲ್ಲಿನ ತಿರುಚಿರಪಳ್ಳಿಯಲ್ಲಿ ಶ್ರೀರಂಗಂ ರಂಗನಾಥರ್ ದೇವಸ್ಥಾನಕ್ಕೆ ಭರತನಾಟ್ಯ ಕಲಾವಿದ ಜಹೀರ್ ಹುಸೇನ್ 600 ವಜ್ರಗಳಿಂದ ಅಲಂಕರಿಸಲ್ಪಟ್ಟ ವಜ್ರ ಖಚಿತ ಕಿರೀಟವನ್ನು(Diamond crown) ದಾನ ಮಾಡಿದ್ದಾರೆ. ಇದು ವಿಷ್ಣುವಿನ 108 ಐಹಿಕ ನಿವಾಸಗಳಲ್ಲಿ ಒಂದಾಗಿದೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
ಇದೇ(ಡಿ.11)ರಂದು ದೇವಸ್ಥಾನದ ಪ್ರಧಾನ ಅರ್ಚಕ ಸುಂದರ ಭಟ್ಟರಿಗೆ ಈ ಕಿರೀಟ ಹಸ್ತಾಂತರಿಸಲಾಯಿತು.
ಕಿರೀಟದ ವಿಶೇಷತೆ ಏನು?
”3,169 ಕ್ಯಾರೇಟ್ ತೂಕದ ಒಂದೇ ಮಾಣಿಕ್ಯ ಕಲ್ಲಿನಿಂದ ತಯಾರಿಸಲ್ಪಟ್ಟ ಮತ್ತು ಚಿನ್ನ, ಪಚ್ಚೆಗಳಿಂದ ಮಾಡಲ್ಪಟ್ಟ ವಿಶೇಷ ರೀತಿಯ ಕಿರೀಟ ಇದಾಗಿದೆ. ಅಲ್ಲದೆ, ಸುಮಾರು 200 ವರ್ಷಗಳಿಂದ ಇಂತಹ ಕಿರೀಟ ಯಾರು ಅರ್ಪಿಸಿಲ್ಲ ಎಂದು ವರದಿಯಾಗಿದೆ. ಇಡೀ ಕಿರೀಟವನ್ನು ಒಂದೇ ಮಾಣಿಕ್ಯದಿಂದ ಮಾಡಲಾಗಿದೆ. ಇದು ವಿಶ್ವದ ಏಕೈಕ ಮೊದಲ ಕಿರೀಟ” ಎಂದು ಕಲಾವಿದ ಹುಸೇನ್ ಹೇಳಿದ್ದಾರೆ.
ಇದನ್ನೂ ಓದಿ: ಬಸ್ ದುರಂತ; 7 ಮಂದಿ ಸಾವು..Accidentನ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ
”ಎಂಟು ವರ್ಷಗಳ ಸುದೀರ್ಘ ಪ್ರಕ್ರಿಯೆ ಬಳಿಕ ಈ ಕಿರೀಟವನ್ನು ಕುಶಲಕರ್ಮಿ ಗೋಪಾಲ್ದಾಸ್ ತಯಾರಿಸಿದ್ದಾರೆ. ಅಲ್ಲದೆ, ಈ ಮಾಣಿಕ್ಯ ಕಲ್ಲನ್ನು ಪತ್ತೆ ಹಚ್ಚಲು ಮೂರು ವರ್ಷ ಸಮಯ ತಗೆದುಕೊಂಡಿದೆ. ಕೊನೆಗೂ ರಾಜಸ್ತಾನದಲ್ಲಿ ಪತ್ತೆಯಾಗಿದೆ. ಇದನ್ನು ಸೂಕ್ಷ್ಮ ರೀತಿಯಲ್ಲಿ ತಯಾರಿಸಬೇಕು. ಇಂತಹ ಸಮಯದಲ್ಲಿ ಅಪಾಯ ಇದ್ದೇ ಇರುತ್ತದೆ. ಆದರೆ, ಯಾವುದೇ ಅಪಾಯ ಇಲ್ಲದೆ ಈ ಕಿರೀಟ ತಯಾರಿಸಿದ್ದಾರೆ” ಎಂದು ಹುಸೇನ್ ಹೇಳಿದ್ದಾರೆ.
ಮುಂದುವರೆಸಿ ಮಾತನಾಡಿರುವ ಅವರು, ನಾನು ನನ್ನ ದೇವರಿಗೆ ಸಂಪೂರ್ಣವಾಗಿ ಈ ಕಿರೀಟವನ್ನು ಸಮರ್ಪಿಸಿದ್ದೇನೆ. ನನಗೆ ಎಲ್ಲ ಧರ್ಮಗಳ ಮೇಲೆ ನಂಬಿಕೆ ಇದೆ. ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಂದು ಬೇಧ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).