ಬಸ್​ ದುರಂತ; 7 ಮಂದಿ ಸಾವು..Accidentನ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ

salman (2)
Published on

ಮುಂಬೈ: ಇಲ್ಲಿನ ಕುರ್ಲಾ ಪ್ರದೇಶದಲ್ಲಿ ಚಾಲಕನ ನಿಯಂಣತ್ರಣ ತಪ್ಪಿ ಇದೇ ಡಿ.09ರಂದು ತಡರಾತ್ರಿ ಬಸ್​ವೊಂದು(Accident) ಪಾದಚಾರಿಗಳ ಮೇಲೆ ಹರಿದ ಪರಿಣಾಮ 7 ಮಂದಿ ಬಲಿಯಾಗಿದ್ದರು. ಅಲ್ಲದೆ, 49 ಜನ ಗಾಯಗೊಂಡಿದ್ದರು. ಇದೀಗ ಬಸ್​ ಡಿಕ್ಕಿ ಹೊಡೆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾದ್ದು, ವೈರಲ್​ ಆಗಿವೆ.

ವಿಡಿಯೋದಲ್ಲಿ ಏನಿದೆ?

''ಡಿಕ್ಕಿ ಆಗುವ ಮುಂಚೆ ಬಸ್​ನಲ್ಲಿ ಕಂಡಕ್ಟರ್​ ಬಸ್​ ಟಿಕೆಟ್​ ಕೊಡುತ್ತಿದ್ದಾರೆ. ಬಳಿಕ ಬಸ್​ ಏಕಾಏಕಿ ಅಲುಗಾಡುತ್ತಿದೆ. ಇದಕ್ಕಿದಂತೆ ಪ್ರಯಾಣಿಕರು ಗಾಬರಿಗೊಂಡರು. ಬಸ್​ ಡಿಕ್ಕಿ ಆಗುತ್ತಿದ್ದಂತೆ ಎಚ್ಚೆತ್ತ ಪ್ರಯಾಣಿಕರು ಬಸ್​​ನ ಕಿಟಕಿಯಿಂದ ಹೊರ(ಜಂಪ್​) ಹೊಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದೀಗ ಈ ವಿಡಿಯೋ ಕ್ಲೀಪ್​​ ಸೋಷಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ''.

ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸಿದ್ದಾನೆ. ಹಾಗಾಗಿಯೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಬಸ್ ಚಾಲಕನಿಗೆ ದೊಡ್ಡ ವಾಹನ ಚಲಾಯಿಸಿದ ಅನುಭವ ಇರಲಿಲ್ಲ . ಡಿಸೆಂಬರ್ 1ರಿಂದ ಸರ್ಕಾರಿ ಬಸ್ ಓಡಿಸುತ್ತಿದ್ದಾರೆ. ಚಾಲಕನ ಅನುಭವದ ಕೊರತೆಯಿಂದ ಇದು ಸಂಭವಿಸಿದೆಯೇ ಅಥವಾ ಅಪಘಾತಕ್ಕೆ ಬೇರೆ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ, (ಏಜೆನೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net