

ತಮಿಳುನಾಡು: ಇಲ್ಲಿನ ಶಂಕರ್ಕೋವಿಕ್ ರೈಲು ನಿಲ್ದಾಣದಲ್ಲಿ 18 ವರ್ಷದ ಯುವಕ ಇದಕ್ಕಿಂತೆ 24ರ ಯುವಕ ಮೇಲೆ ಹಲ್ಲೆ ಮಾಡಿ ಬಳಿಕ ಕುಡುಗೋಲಿನಿಂದ ಅವನ ಎಡ ಗೈ ತುಂಡಾರಿಸಿ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.
ವಾಸುದೇವನಲ್ಲೂರಿನ ನಿವಾಸಿ ಸೆಲ್ವರಾಜ್(24) ಹಲ್ಲೆಗೊಳಗಾದ ಯುವಕ. ಇತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋತಿಗೈ ಎಕ್ಸ್ಪ್ರೆಸ್ನಲ್ಲಿ ಚೈನ್ನೈಗೆ ತೆರಳುವ ವೇಳೆ ಘಟನೆ ನಡೆದಿದೆ. ಅಲ್ಲದೆ, ಹಲ್ಲೆ ಮಾಡಿ ಪರಾರಿಯಾಗಿದ್ದ ಕಣ್ಣನ್(18) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.
ಸೆಲ್ವರಾಜ್ ರೈಲು ಹತ್ತಲು ಪ್ರಯತ್ನಿಸುತ್ತಿದ್ದಂತೆ ಹಿಂದೆ ಬಂದ ಆರೋಪಿ ಕಣ್ಣನ್ ಏಕಾಏಕಿ ಕುಡುಗೋಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಸಂತ್ರಸ್ತನ ಎಡಗೈ ತುಂಡಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೆಲ್ವರಾಜ್ ಅವರನ್ನು ಸ್ಥಳೀಯ ರೈಲ್ವೆ ಪೊಲೀಸರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವಿರಾರು ಜನರು ಓಡಾಡುವ ರೈಲು ನಿಲ್ದಾಣದಲ್ಲಿ ಎಲ್ಲರ ಕಣ್ಣೇದುರೆ ಕೃತ್ಯ ನಡೆದಿದ್ದು ಪ್ರಯಾಣಿಕರನ್ನು ಈ ಘಟನೆ ಬೆಚ್ಚಿಬೀಳಿಸಿದೆ.
ತಕ್ಷದಣಲ್ಲಿ ತನಿಖೆ ಆರಂಭಿಸಿದ ಸ್ಥಳೀಯ ಪೊಲೀಸರು, ರೈಲ್ವೆ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿ ಕಸ್ಟಡಿಗೆ ತಗೆದುಕೊಳ್ಳಲಾಗಿದೆ(ನ್ಯಾಯಾಂಗ ಬಂಧನ). ತನಿಖೆ ಬಳಿಕ ಕೃತ್ಯಕ್ಕೆ ಕಾರಣ ಎನು ಎಂಬುವುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಇಂತಹ ಪ್ರಕರಣಗಳು ತಮಿಳುನಾಡಿನಲ್ಲಿ ಇತ್ತೀಚಿಗೆ ಪದೇಪದೆ ನಡೆಯುತ್ತಿದ್ದು, ಸಾರ್ವಜನಿಕರನ್ನು ಭಯ ಬೀಳಿಸುವುದರ ಜತೆ ಆಕ್ರೋಶವನ್ನು ಉಂಟು ಮಾಡುತ್ತೀವೆ. ಇನ್ನು ಈ ಘಟನೆ ರೈಲು ನಿಲ್ದಾಣಗಳ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಎತ್ತಿ ತೋರಿಸುತ್ತೀವೆ,(ಏಜೆನ್ಸೀಸ್).