

ಕುವೈತ್: ಭಾರತೀಯ ಪ್ರಜೆಗಳು ಅದರಲ್ಲಿ ಕೇರಳದ ನರ್ಸ್ಗಳು(ದಾದಿಯರು) ಬ್ಯಾಂಕ್ಗಳಿಗೆ ವಂಚಿಸುತ್ತಿದ್ದಾರೆ ಎಂದು ಕುವೈತ್ ಬ್ಯಾಂಕ್ವೊಂದು ನೀಡಿದ ದೂರಿನ ಆರೋಪದ ಮೇಲೆ ಇಲ್ಲಿನ ಕೇರಳಲ್ಲಿ ಹತ್ತು ಮಂದಿ ಮೇಲೆ ದೂರು ದಾಖಲಾಗಿದೆ.
ಈ 10 ಪ್ರಕರಣಗಳಲ್ಲಿ ವಂಚಿಸಿದ ಮೊತ್ತವು 10.21 ಕೋಟಿ ರೂ. ಕುವೈತ್ನ ಗಲ್ಫ್ ಬ್ಯಾಂಕ್ನಲ್ಲಿ ಸುಮಾರು 1,425 ಭಾರತೀಯರು 700 ಕೋಟಿ ರೂ. ವಂಚನೆ ಮಾಡಿದ್ದಾರೆ. ಅದರಲ್ಲೂ ಈ ಎಲ್ಲರೂ ಕೇರಳದವರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ವ್ಯಕ್ತಿಗಳು ಸಾಲ ಪಡೆದು ರಜೆ ಮೇಲೆ ಬೇರೆ ಬೇರೆ ದೇಶಗಳಿಗೆ ಹೋಗಿದ್ದಾರೆ. ಬಳಿಕ ಸಾಲ ಮರುಪಾತಿ ಮಾಡುವುದನ್ನು ನಿಲ್ಲಿಸಿದ್ದಾರೆ. ಅನೇಕರು ಕೆನಡಾ ಮತ್ತು ಯುರೋಪ್ ದೇಶಗಳಿಗೆ ವಲಸೆ ಹೋಗಿದ್ದಾರೆ. ಮೊದಲಿನಲ್ಲಿ ಸಣ್ಣ ಮೊತ್ತದ ಸಾಲ ಪಡೆದು ಕಟ್ಟಿದ್ದಾರೆ. ಬಳಿಕ ನಂಬಿಕೆಯ ಆಧಾರದ ಮೇಲೆ ದೊಡ್ಡ ಮೊತ್ತದ ಹಣ(ಸಾಲ) ಪಡೆದಿದ್ದಾರೆ ಎಂದು ದೂರಿನಲ್ಲಿ ಬ್ಯಾಂಕ್ ಹೇಳಿಕೊಂಡಿದೆ.
ಇನ್ನು ಸಾಲ ಮರುಪಾವತಿ ಆಗದಿರುವುದರ ಬಗ್ಗೆ ಬ್ಯಾಂಕ್ ತನಿಖೆ ನಡೆಸಿದಾಗ ಹಲವು ಮಾಲಿಯಾಳಿ ನರ್ಸ್ಗಳು ಬ್ಯಾಂಕ್ಗೆ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಅಲ್ಲಿನ ಬ್ಯಾಂಕ್ ಅಧಿಕಾರಿಳು ಕೇರಳಕ್ಕೆ ಭೇಟಿ ನೀಡಿ ದೂರು ಕೊಟ್ಟಿದ್ದಾರೆ.
ಕೇರಳದ ಪೊಲೀಸರು ಈ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲಾ ಭಾರತೀಯ ಪ್ರಜೆಗಳ ಅಥವಾ ವಿದೇಶಿಯರಾ? ಎಂದು ಮೊದಲು ತಿಳಿಯಬೇಕು. ಅಲ್ಲದೆ, ಅವರ ಪಸ್ತುತ ಸ್ಥಳಗಳನ್ನು ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).