Murder Case: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರ, ಸೌರಭ್ ರಜಪುತ್ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್ನಲ್ಲಿರಿಸಿ, ಅದನ್ನು ಸಿಮೆಂಟ್ನಿಂದ ಮುಚ್ಚಿಟ್ಟ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ: ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ | Ranya Rao
ಕೊಲೆ ಆರೋಪಿಗಳಾದ ಸೌರಭ್ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ಇಬ್ಬರನ್ನೂ ಪ್ರತ್ಯೇಕ ಸೆಲ್ಗಳಲ್ಲಿ ಇರಿಸಿರುವ ಪೊಲೀಸ್ ಅಧಿಕಾರಿಗಳು, ಒಬ್ಬರ ಮುಖ ಇನ್ನೊಬ್ಬರು ನೋಡದಂತೆ, ಮಾತನಾಡಿಸದಂತೆ ಕೊಲೆಗೈದ ಪ್ರೇಮಿಗಳ ರೆಕ್ಕೆಯನ್ನು ಕತ್ತರಿಸಿ ಮೂಲೆಯಲ್ಲಿ ಕೂರಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಕಡೆಗೂ ಆರೋಪಿಗಳಿಂದ ಸತ್ಯವನ್ನು ಬಾಯ್ಬಿಡಿಸಿದ್ದಾರೆ.
ತನಿಖೆಯಲ್ಲಿ ಅಧಿಕಾರಿಗಳ ಮುಂದೆ ಕೊಲೆಯ ಭೀಕರತೆ ವಿವರಿಸಿದ ಮುಸ್ಕಾನ್, “ಪತಿ ಲಂಡನ್ನಿಂದ ವಾಪಾಸ್ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ತಕ್ಷಣವೇ ಅವರ ಹತ್ಯೆಗೆ ನಾವಿಬ್ಬರು ಸಂಚು ಹೂಡಿದೆವು. 800 ರೂ.ಗೆ ಎರಡು ಹರಿತವಾದ ಚಾಕು ಖರೀದಿಸಿದ್ದೆವು. 8 ದಿನಗಳ ಕಾಲ ಚಾಕುವಿನಿಂದ ಚುಚ್ಚುವುದು ಹೇಗೆಂದು ತರಬೇತಿ ಮಾಡಿದೆವು. ಇದರ ಜತೆಗೆ ರೇಜರ್ ಬ್ಲೇಡ್ ಅನ್ನು ತಲೆಯನ್ನು ದೇಹದಿಂದ ಬೇರ್ಪಡಿಸಲು ತಂದಿದ್ದೆ” ಎಂದಿದ್ದಾಳೆ.
“ಮಾ.04ರಂದು ಸೌರಭ್ ಮನೆಗೆ ಬಂದಾಗ ಊಟದಲ್ಲಿ ನಿದ್ರೆ ಮಾತ್ರ ಬೆರೆಸಿ ಕೊಟ್ಟೆ. ಕೆಲವು ಸಮಯದ ಬಳಿಕ ಅವರು ನಿದ್ರೆಗೆ ಜಾರಿದರು. ನಾವು ಹಾಕಿಕೊಂಡ ಸಂಚಿನಂತೆ ಚಾಕುವಿನಿಂದ ಮೂರು ಬಾರಿ ಇರಿದೆವು. ಆ ನಂತರ ರೇಜರ್ ಬ್ಲೇಡ್ನಿಂದ ಪತಿಯ ಕತ್ತನ್ನು ಸೀಳಿದೆ. ಸಾಹಿಲ್ ಕುತ್ತಿಗೆಯನ್ನು ದೇಹದಿಂದ ಬೇರ್ಪಡಿಸಿದ. ಇಬ್ಬರೂ ಸೇರಿ ದೇಹವನ್ನು 15 ತುಂಡು ಮಾಡಿ, ಡ್ರಮ್ನಲ್ಲಿರಿಸಿ, ಸಿಮೆಂಟ್ನಿಂದ ಮುಚ್ಚಿದೆವು” ಎಂದು ಹೇಳಿದ್ದಾಳೆ,(ಏಜೆನ್ಸೀಸ್).
ಏನಿದು ಪ್ರಕರಣ?
ಉತ್ತರಪ್ರದೇಶ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆಗೈದು ತಂದೆಯನ್ನು ಡ್ರಮ್ನಲ್ಲಿ ಸಿಮೆಂಟ್ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಈ ವೇಳೆ ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ ಗೋಳಾಡಿದ್ದಾರೆ. ಮಗ ನಾಪತ್ತೆಯಾಗಿದ್ದಾನೆ ಆತನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದೇ ತಡ ಮೃತ ಸೌರಭ್ ಪುತ್ರಿ, ಅಪ್ಪ ಡ್ರಮ್ನಲ್ಲಿ ಇದ್ದಾರೆ ಎಂದು ಸುಳಿವು ನೀಡಿದ್ದಳು. ಆದರೆ, ಆ ಕ್ಷಣಕ್ಕೆ ಇದು ಉಪಯೋಗವಾಗಲಿಲ್ಲ. ಕಾರಣ, ಬಾಲಕಿ ತಮಾಷೆ ಮಾಡುತ್ತಿದ್ದಾಳೆ ಎಂದು ಮನೆಯವರು ಅಂದುಕೊಂಡಿದ್ದರು. ಅಂತಿಮವಾಗಿ ಡ್ರಮ್ನಲ್ಲಿದ್ದ ಸಿಮೆಂಟ್ ಅನ್ನು ಹೊಡೆದಾಗ ಸೌರಭ್ ಮೃತದೇಹ ಪತ್ತೆಯಾಯಿತು.