ಮುಂಬೈ ಅಗ್ನಿ ಅವಘಡ: ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ: ಸಿಎಂ ಶಿಂಧೆ

Untitled design - 2023-10-06T193536.670
Published on

ಮುಂಬೈ: ಶುಕ್ರವಾರ (ಅ.5) ಗೋರೆಗಾಂವ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಂಟು ಜನರು ಸಾವನ್ನಪ್ಪಿದ್ದು, 61 ಮಂದಿ ಗಾಯಗೊಂಡ ಬೆನ್ನಲ್ಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದಾರೆ.

ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಶಿಂಧೆ, ಸಂತ್ರಸ್ತರನ್ನು ಭೇಟಿ ಮಾಡುವಂತೆ ರಕ್ಷಣಾ ಸಚಿವ ಮಂಗಲ್ ಪ್ರಭಾತ್ ಲೋಧಾ ಮತ್ತು ದೀಪಕ್ ಕೇಸರ್ಕರ್ ಅವರಿಗೆ ಸೂಚಿಸಿದರು. ಘಟನೆ ಕುರಿತು ಟ್ವೀಟ್​ ಮಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಮುಂಬೈನ ಗೋರೆಗಾಂವ್ ಅಗ್ನಿ ದುರಂತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ತುಂಬ ನೋವಾಗಿದೆ. ನಾವು ನಾಗರಿಕ ಅಧಿಕಾರಿಗಳು ಮತ್ತು ಮುಂಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲಾ ನೆರವು ನೀಡಲಾಗುತ್ತಿದೆ. ಕುಟುಂಬಗಳಿಗೆ ಸಂತಾಪ" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, "ಪಿಎಂಎನ್‌ಆರ್‌ಎಫ್‌ನಿಂದ ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ಎರಡು ಲಕ್ಷ ರೂ. ಪರಿಹಾರ ಹಣವನ್ನು ನೀಡಲಾಗುವುದು" ಎಂದು ತಿಳಿಸಿದ್ದಾರೆ.

ಘಟನೆಯ ವಿವರ: ಗುರುವಾರ (ಅ.5) ಮುಂಜಾನೆ 3:05ಕ್ಕೆ ಗೋರೆಗಾಂವ್ ಪಶ್ಚಿಮದಲ್ಲಿರುವ ಆಜಾದ್ ಮೈದಾನದ ಸಮೀಪದಲ್ಲಿರುವ ಏಳು ಅಂತಸ್ತಿನ SRA 'ಜಯ್ ಭವಾನಿ' ಕಟ್ಟಡದಲ್ಲಿ ಅಗ್ನಿ ಕಾಣಿಸಿಕೊಂಡಿತು. 2ನೇ ಹಂತದ ಬೆಂಕಿಯನ್ನು ಬೆಳಗ್ಗೆ 6:54ಕ್ಕೆ ನಂದಿಸಲಾಯಿತು.

ಬಿಎಂಸಿ ಪ್ರಕಾರ, ಘಟನೆಯಲ್ಲಿ 68 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕೂಪರ್, ಎಚ್‌ಬಿಟಿ ಆಸ್ಪತ್ರೆ ಜೋಗೇಶ್ವರ್, ಲೈಫ್‌ಲೈನ್, ಮಾತೋಶ್ರೀ ಗೋಮತಿ ಮತ್ತು ಸುವಿಧಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net