

ಗುಜರಾತ್: ಭಾರತದ ಮೊದಲ ಬುಲೆಟ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆ ಏಳು ನಿಮಿಷಗಳಿಗೆ ಇಳಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇಂದು (ಆ.03) ಅಯೋಧ್ಯಾ ಎಕ್ಸ್‌ಪ್ರೆಸ್‌ಗೆ ವರ್ಚುವಲ್ ಆಗಿ ಚಾಲನೆ ನೀಡಲು ಭಾವನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಅವರು, ಮುಂಬೈ ಹಾಗೂ ಅಹಮದಾಬಾದ್ ನಡುವಿನ ಭಾರತದ ಮೊದಲ ಬುಲೆಟ್ ರೈಲು 508 ಕಿ.ಮೀ.ಗಳ ಅಂತರವನ್ನು ಕ್ರಮಿಸಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ) ಪ್ರದೇಶದಿಂದ ಪ್ರಯಾಣವನ್ನು ಆರಂಭಿಸುವ ಅದು ಪ್ರತಿ ಗಂಟೆಗೆ 320 ಕಿ.ಮೀ.ವೇಗದಲ್ಲಿ ಚಲಿಸಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ರೈಲು ಗುಜರಾತಿನ ವಾಪಿ, ಸೂರತ್, ವಡೋದರಾ ಮತ್ತು ಅಹಮದಾಬಾದ್‌ಗಳಿಗೆ ಸಂಪರ್ಕ ಕಲ್ಪಿಸಲಿದೆ. ಪೋರಬಂದರ್ ಮತ್ತು ರಾಜ್‌ಕೋಟ್ ನಡುವೆ ಹೊಸ ರೈಲು ಸೇವೆ, ರಣವಾವ್ ನಿಲ್ದಾಣದಲ್ಲಿ ರೂ.135 ಕೋಟಿ ವೆಚ್ಚದ ಕೋಚ್ ನಿರ್ವಹಣಾ ಸೌಲಭ್ಯ, ಪೋರಬಂದರ್ ನಗರದಲ್ಲಿ ರೈಲ್ವೆ ಫ್ಲೈಓವರ್, ಭಾವನಗರದ ಹೊಸ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಸೇರಿದಂತೆ ಗುಜರಾತ್‌ನಲ್ಲಿ ಮುಂಬರುವ ರೈಲ್ವೆ ಯೋಜನೆಗಳನ್ನು ವೈಷ್ಣವ್ ವಿವರಿಸಿದರು.
(ಏಜೆನ್ಸೀಸ್)
ದೇಶಾದ್ಯಂತ 1,300 ರೈಲು ನಿಲ್ದಾಣಗಳನ್ನು ಪ್ರಸ್ತುತ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾರೂ ಇಷ್ಟು ದೊಡ್ಡ ಕೆಲಸವನ್ನು ಕೈಗೊಂಡಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ನವೀಕರಿಸಿದಾಗ, ಎಲ್ಲಾ ನಿಲ್ದಾಣಗಳು ಮತ್ತು ರೈಲುಗಳನ್ನು ಮುಚ್ಚುವ ಮೂಲಕ ಅವುಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ ಎಂದರು.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ. ಎರಡೂ ರಾಜ್ಯಗಳ ಸರ್ಕಾರಗಳು ಕೆಲಸವನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತವೆ. ನರೇಂದ್ರ ಮೋದಿ ಸರ್ಕಾರ ಕಳೆದ 11 ವರ್ಷಗಳಲ್ಲಿ 34,000 ಕಿ.ಮೀ ಹೊಸ ರೈಲ್ವೆ ಹಳಿಗಳನ್ನು ಸೇರಿಸಲಾಗಿದೆ, ಪ್ರತಿದಿನ ಸುಮಾರು 12 ಕಿ.ಮೀ. ರೈಲ್ವೆ ಹಳಿಗಳನ್ನು ಹಾಕಲಾಗುತ್ತಿದೆ ಎಂದು ವೈಷ್ಣವ್ ಹೇಳಿದರು.