

ನಾಗ್ಪುರ; ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ನೀಡಿದ ವ್ಯಕ್ತಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಇಂದು (ಆ.03) ಬೆಳಗ್ಗೆ 8:46 ಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಾರ್ಧಾ ರಸ್ತೆಯಲ್ಲಿರುವ ಗಡ್ಕರಿ ಅವರ ಮನೆಯನ್ನು ಸ್ಫೋಟಿಸಲಾಗುವುದು ಬೆದರಿಕೆ ಹಾಕಲಾಗಿತ್ತು.
ತುಳಸಿ ಬಾಗ್ ರಸ್ತೆಯ ನಿವಾಸಿಯಾದ ರಾವತ್, ಮೆಡಿಕಲ್ ಚೌಕ್ ಬಳಿಯ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅವರು ತನ್ನ ಫೋನ್ನಿಂದ ಕರೆ ಮಾಡಿ, ಗಡ್ಕರಿ ಅವರ ನಿವಾಸವನ್ನು 10 ನಿಮಿಷಗಳಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಪೊಲೀಸರು ಶಂಕಿತನನ್ನು ಪತ್ತೆಹಚ್ಚಿ ನಾಗ್ಪುರದ ಬಿಮಾ ದವಾಖಾನಾ ಬಳಿ ಬಂಧಿಸಿದ್ದಾರೆ.
ಆ ಕರೆಯ ಬಳಿಕ, ಪ್ರತಾಪ್ ನಗರ ಪೊಲೀಸರಿಗೆ ಮಾಹಿತಿಯನ್ನು ರವಾನಿಸಲಾಯಿತು, ಅವರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬೆದರಿಕೆ ಹಾಕಿದ ಸ್ವಲ್ಪ ಸಮಯದ ಬಳಿಕ ಶಂಕಿತ ವ್ಯಕ್ತಿ ಉಮೇಶ್ ವಿಷ್ಣು ರಾವತ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
(ಏಜೆನ್ಸೀಸ್)
ಇನ್ನೂ ಅಧಿಕಾರಿಗಳು ನಿತಿನ್ ಗಡ್ಕರಿ ಅವರ ನಿವಾಸದ ಸುತ್ತ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಬಾಂಬ್ ಬೆದರಿಕೆ ಬಗ್ಗೆ ತನಿಖೆ ಮುಂದುವರಿಸಿದ್ದರೂ, ಸಚಿವರ ಸುರಕ್ಷತೆಯನ್ನು ಖಾತರಿಪಡಿಸುವುದು ಬಹು ಮುಖ್ಯ ಕರ್ತವ್ಯವಾಗಿದೆ. ಹಾಗಾಗಿ ಬೆದರಿಕೆಯ ಹಿಂದಿನ ಉದ್ದೇಶದ ಕುರಿತು ಹೆಚ್ಚಿನ ವಿವರಗಳನ್ನು ಪತ್ತೆಹಚ್ಚುವ ಕೆಲಸ ಆರಂಭಿಸಿದ್ದಾರೆ.