ಐ ಲವ್​ ಮೈ ಜಾಬ್​​.. ಹೆಮ್ಮೆಯಿಂದಲೆ ಬಿಕಿನಿ ಹಾಕಿಕೊಳ್ಳುವೆ; ಮುಮೈತ್ ಖಾನ್ ಹೀಗೇಳಿದ್ದೇಕೆ? | Mumaith Khan

ಹೈದರಾಬಾದ್​​: ಚಿತ್ರರಂಗದಲ್ಲಿ ಅನೇಕರು ನಟಿಯರಾಗಿ ಸ್ಥಾನಮಾನವನ್ನು ಸಾಧಿಸುವ ಮತ್ತು ಯಶಸ್ವಿಯಾಗುವ ಕನಸು ಕಾಣುತ್ತಾರೆ . ಆದರೆ ಅವರಲ್ಲಿ ಕೆಲವರಿಗೆ ಮಾತ್ರ ವಿಶೇಷ ಮನ್ನಣೆ ದೊರೆಯುತ್ತದೆ. ಎಲ್ಲರೂ ನಾಯಕ ಅಥವಾ ನಾಯಕಿ ಆಗಬೇಕಾಗಿಲ್ಲ. ನಾಯಕಿಯಾಗಲೆಂದು ಬಂದವರು ಐಟಂ ಹಾಡುಗಳಿಂದಲೇ ಮನ್ನಣೆ ಪಡೆದು ತನ್ನದೇ ಅಭಿಮಾನಿಗಳನ್ನು ಗಳಿಸಿರುವ ಸುಂದರಿಯರಲ್ಲಿ ಮುಮೈತ್ ಖಾನ್(Mumaith Khan) ಒಬ್ಬರು.

ಇದನ್ನು ಓದಿ: ಐಶ್ವರ್ಯಾ-ಅಭಿಷೇಕ್, ಸೈಫ್-ಕರೀನಾ ಮದುವೆಯ ಸಂಗೀತಾ ಸಮಾರಂಭದಲ್ಲಿ ವ್ಯತ್ಯಾಸವಿದೆ; ಡಿಜೆ ಅಕೀಲ್​​ ಹೇಳಿದಿಷ್ಟು.. | DG Aqeel

ಇತ್ತೀಚಿನ ಸಂದರ್ಶನವೊಂದರಲ್ಲಿ ಮುಮೈತ್​ ಖಾನ್​​​ ಐಟಂ ಸಾಂಗ್​ ಮತ್ತು ಹಾಡುಗಳಲ್ಲಿ ಬಳಸುವಂತ ಉಡುಪುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಐಟಂ ಸಾಂಗ್​ ಮತ್ತು ಬೋಲ್ಡ್​ನೆಸ್​​ಗಳಿಂದ ಕ್ಯಾರೆಕ್ಟರ್​ ಅನ್ನು ನಿರ್ಧರಿಸುತ್ತಾರೆ. ಅದರಲ್ಲೂ ಸಿನಿಮಾರಂಗದಲ್ಲಿ ಇಂತಹ ವಿಚಾರಗಳು ಬಹಳ ಬೇಗನೇ ಬೆಳಕಿಗೆ ಬರುತ್ತದೆ ಎಂದು ಅವರನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಮುಮೈತ್ ಖಾನ್​ ಇದೆಲ್ಲಾವನ್ನು ನಾನು ಆಲೋಚಿಸುವುದೇ ಎಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ ಮತ್ತು ಅವರದ್ದೇ ಆದಂತಹ ಜಡ್ಜಮೆಂಟ್​​ ಇರುತ್ತದೆ. ಆದರೆ ಇದಕ್ಕೆಲ್ಲಾ ಯಾರಿಗೂ ಯಾವುದೇ ರೀತಿಯ ಸ್ಪಷ್ಟನೆ ಕೊಡಲು ನನಗಿಷ್ಟ ಇಲ್ಲ. ಅವರು ಹಾಗೆಲ್ಲ ಆಲೋಚಿಸುವುದಾದರೆ ಆಲೋಚಿಸಲಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು. ಮಾತನಾಡುವವರಿಂದ ಏನು ಆಗುವುದಿಲ್ಲ. ನನ್ನ ಕುಟುಂಬ ಪ್ರಶ್ನಿಸಿದರೆ ಉತ್ತರಿಸುವುದು ನನ್ನ ಕರ್ತವ್ಯ. ನಾನು ನನ್ನು ಕುಟುಂಬಕ್ಕೆ ವಿವರಿಸುತ್ತೇನೆ. ಆದರೆ ನನ್ನ ಕುಟುಂಬ ನನ್ನನ್ನು ಅರ್ಥಮಾಡಿಕೊಂಡಿದೆ. ನನಗೆ ಸಾಕಷ್ಟು. ಐ ಲವ್​ ಮೈ ಜಾಬ್​​. ನಾನು ಬಿಕಿನಿ ಹಾಕಿಕೊಳ್ಳಬೇಕೆಂದರೂ ನಾನು ಚಿತ್ರೀಕರಣದಲ್ಲಿ ಹೆಮ್ಮೆಯಿಂದಲೇ ಬಿಕಿನಿ ತೊಡುತ್ತೇನೆ. ಅದು ನನ್ನ ಕೆಲಸ, ನನಗೆ ಸಂಭಾವನೆ ಕೊಡುತ್ತಾರೆ. ಯಾರೆ ಆದರೂ ಅವರವರ ವೃತ್ತಿಗೆ ಅನುಗುಣವಾಗಿ ಬಟ್ಟೆ ಧರಿಸುತ್ತಾರೆ.

ಹೊರಗಡೆಯೆ ಆದರೂ 9 ರಿಂದ 5 ಗಂಟೆಗೆ ಕೆಲಸಕ್ಕೆ ಹೋಗುವವರು ಏಕೆ ಫಾರ್ಮಲ್​​​ ಧರಿಸುತ್ತಾರೆ, ಕ್ಯಾಸ್ಯುಯಲ್​ ಬಟ್ಟೆಗಳನ್ನು ಧರಿಸಬಹುದುದಲ್ಲವೇ. ಅವರಿಗೆ ಅಗತ್ಯವಿರುವ ಉಡುಪುಗಳನ್ನು ಅವರು ಧರಿಸುತ್ತಾರೆ. ಹಾಗೆಯೇ ನನ್ನ ಕೆಲಸಕ್ಕೆ ಅಗತ್ಯವಿರುವ ಉಡುಪುಗಳನ್ನು ನಾನು ಧರಿಸುತ್ತೇನೆ. ನಾನು ನನ್ನ ಕೆಲಸವನ್ನು ಗೌರವಿಸುತ್ತೇನೆ. ನೀವು ನನ್ನ ಕೆಲಸವನ್ನು ಗೌರವಿಸದಿದ್ದಾರೆ ನಾನು ಅದರ ಬಗ್ಗೆ ಚಿಂತಿಸುವುದಿಲ್ಲ. ನೀವು ನನ್ನನ್ನು ಪ್ರೀತಿಸಿದರೆ ನಾನು ಕೂಡ ನಿಮ್ಮನ್ನು ಪ್ರೀತಿಸುವೆ. ನೀವು ಇಷ್ಟಪಡದಿದ್ದರೆ ನಾನು ಇಷ್ಟಪಡುವುದಿಲ್ಲ, ನೀವು ನನಗೆ ಏನಾಗಬೇಕು ಎಂದಿದ್ದಾರೆ. ಅಲ್ಲದೆ ಜನರು ಅವರಿಗಿಷ್ಟ ಬಂದಂತೆ ಮಾತನಾಡುತ್ತಾರೆ. ನಮಗೆ ನಮ್ಮ ಕುಟುಂಬ ಖುಷಿಯಾಗಿರುವುದು ಮುಖ್ಯವೇ ಹೊರತು ಸೊಸೈಟಿ ಅಲ್ಲ. ನಾನು ನನ್ನ ವೃತ್ತಿಯನ್ನು ಗೌರವಿಸುತ್ತೇನೆ. ನನ್ನ ಕೆಲಸ ನನಗೆ ಮತ್ತು ನನ್ನ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ ಎಂದು ಹೇಳಿದರು.(ಏಜೆನ್ಸೀಸ್​​)

‘ತೇರೆ ಇಷ್ಕ್ ಮೇ’ ಸಿನಿಮಾದಲ್ಲಿನ ಧನುಷ್ ಲುಕ್ ರಿವೀಲ್​​; ಕಾಲೇಜಿನಲ್ಲಿ ನಡೆದ ಚಿತ್ರೀಕರಣದ ವಿಡಿಯೋ ವೈರಲ್​ | Dhanush

Share This Article

ಹೋಟೆಲ್​ ಸ್ಟೈಲ್​​ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್​ ರುಚಿ…

ಬೇಸಿಗೆಯಲ್ಲಿ ಪುದೀನಾ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಉಪಯುಕ್ತ ಮಾಹಿತಿ ’ Health Tips

ಭಾರತೀಯರ ದಿನಚರಿಯ ಪ್ರಮುಖ ಭಾಗವೆಂದರೆ ಚಹಾ. ಭಾರತದ ಪ್ರತಿಯೊಂದು ಮೂಲೆಯಲ್ಲೂ ನೀವು ಚಹಾ ಪ್ರಿಯರನ್ನು ಕಾಣಬಹುದು.…

ಕ್ಯಾನ್ಸರ್​ ಮಾತ್ರವಲ್ಲ.. ಧೂಮಪಾನದಿಂದ ಬರುವ ಅಪಾಯಕಾರಿ ಕಾಯಿಲೆಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಭಾರತದಲ್ಲಿ ಧೂಮಪಾನವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರಲ್ಲಿ ಇದರ ಅಭ್ಯಾಸ…