ನವದೆಹಲಿ: ಕಾಲಿವುಡ್ ನಟ ಧನುಷ್(Dhanush) ಪ್ರಸ್ತುತ ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ತನ್ನ ಮುಂಬರುವ ಸಿನಿಮಾ ‘ತೇರೆ ಇಷ್ಕ್ ಮೇ’ ಚಿತ್ರೀಕರಣದಲ್ಲಿದ್ದಾರೆ. ನಿರ್ದೇಶಕ ಆನಂದ್ ಎಲ್ ರೈ ಅವರ ಚಿತ್ರದ ಸೆಟ್‌ಗಳಿಂದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಧನುಷ್ ಕಾಲೇಜಿನಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ.
ಇದನ್ನು ಓದಿ: ‘ಎನ್‌ಟಿಆರ್’ರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಟಿ-ನಿರ್ಮಾಪಕಿ ಕೃಷ್ಣವೇಣಿ ನಿಧನ | C Krishnaveni
ಕಾಲೇಜಿನ ಕ್ಯಾಂಪಸ್‌ನಲ್ಲಿ ಸಂಭ್ರಮ ಮನೆಮಾಡಿದೆ. ವಿದ್ಯಾರ್ಥಿಗಳು ನಟನ ಆ್ಯಕ್ಷನ್ ಸೀನ್ ಅನ್ನು ಸೆರೆಹಿಡಿದಿದ್ದಾರೆ. ಧನುಷ್ ಕಾಲೇಜಿನಲ್ಲಿ ಓಡುತ್ತಿರುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿದ್ಯಾರ್ಥಿಗಳು ಹಂಚಿಕೊಂಡ ಸೋರಿಕೆಯಾದ ದೃಶ್ಯಗಳು ಚಿತ್ರದ ಚಿತ್ರೀಕರಣದ ತೆರೆಮರೆಯ ದೃಶ್ಯಗಳನ್ನು ತೋರಿಸುತ್ತವೆ. ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋದಲ್ಲಿ ಧನುಷ್ ಜನಸಂದಣಿಯ ಮೂಲಕ ಓಡುತ್ತಿರುವುದನ್ನು ತೋರಿಸಲಾಗಿದ್ದು ಸುತ್ತಲಿನ ಜನರು ನಟನನ್ನು ನೋಡುತ್ತಿದ್ದಾರೆ. ಈ ವೈರಲ್ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ಧನುಷ್ ಅವರ ಹೊಸ ಲುಕ್ ಕೂಡ ಕಂಡುಬಂದಿದೆ
No De-aging Needed for #Dhanush 🫣❤️ #TereIshkMein pic.twitter.com/TvjtlE6WHM
— smritigit Paul (@smritigit_pal) February 16, 2025
41ನೇ ವಯಸ್ಸಿನಲ್ಲಿ ಡಿಜಿಟಲ್ ಡಿ-ಏಜಿಂಗ್ ಅಗತ್ಯವಿಲ್ಲದೆ ಕಾಲೇಜು ವಿದ್ಯಾರ್ಥಿಯ ಪಾತ್ರವನ್ನು ನಿರ್ವಹಿಸುವ ಧನುಷ್ ಅವರ ಸಾಮರ್ಥ್ಯವನ್ನು ಅಭಿಮಾನಿಗಳು ಜಾಲತಾಣಲದ್ಲಿ ಶ್ಲಾಘಿಸಿದ್ದಾರೆ. ‘ರಾಂಝನಾ’ (2013) ಮತ್ತು ‘ಅತ್ರಂಗಿ ರೇ’ (2021) ನಂತರ ಆನಂದ್ ಎಲ್. ರೈ ಅವರೊಂದಿಗೆ ಧನುಷ್ ಅವರ ಮೂರನೇ ಚಿತ್ರ ಇದು.
ಈ ಸಿನಿಮಾ ಘೋಷಣೆಯಾದಾಗಿನಿಂದ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಇತ್ತೀಚೆಗೆ ಕೃತಿ ಸನೊನ್ ಈ ಚಿತ್ರಕ್ಕೆ ಸೇರ್ಪಡೆಗೊಂಡಿರುವುದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ತೇರೆ ಇಷ್ಕ್ ಮೇ ಸಿನಿಮಾವು 28 ನವೆಂಬರ್ 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್)