ಮುಂಬೈ: ಬಾಲಿವುಡ್ನ ಸೆಲಿಬ್ರಿಟಿ ಸಮಾರಂಭಗಳು ಮತ್ತು ಪಾರ್ಟಿಗಳ ಡಿಜೆ ಅಕೀಲ್(DG Aqeel) ಎಂದು ತಿಳಿದುಬಂದಿದೆ. ಅವರು ಹಲವು ವರ್ಷಗಳಿಂದ ಉದ್ಯಮದಲ್ಲಿದ್ದಾರೆ. ಅನೇಕ ಸೆಲೆಬ್ರಿಟಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವರು ಕೆಲವು ಸೆಲೆಬ್ರಿಟಿಗಳ ಮದುವೆಗಳು ಮತ್ತು ಪಾರ್ಟಿಗಳಲ್ಲಿ ಡಿಜೆ ಆಗಿದ್ದಾರೆ. ಬಾಲಿವುಡ್ ಫೇಮಸ್ ಕಪ್ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಹಾಗೂ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮದುವೆಯ ಸಂಗೀತಾ ಸಮಾರಂಭ ಇವರ ನೇತೃತ್ವದಲ್ಲಿ ನಡೆದಿದೆ.
ಇದನ್ನು ಓದಿ: ಸಮಯ್ ರೈನಾ ಮನವಿ ತಿರಸ್ಕರಿಸಿದ ಸೈಬರ್ ಸೆಲ್ ಪೊಲೀಸರು; ಯೂಟ್ಯೂಬರ್ ಕೇಳಿದ್ದೇನು ಗೊತ್ತಾ? | Samay Raina
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಕೀಲ್ ಈ ಫೇಮಸ್ ಜೋಡಿಗಳ ಮದುವೆ ಸಂಗೀತಾ ಕಾರ್ಯಕ್ರಮ ಹೇಗಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸಂಗೀತ ಸಮಾರಂಭವನ್ನು ತಮ್ಮ ಜುಹು ಮನೆಯಲ್ಲಿ ಹೇಗೆ ಆಯೋಜಿಸಲಾಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು. ಆದರೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಆತ್ಮೀಯ ಸಮಾರಂಭ ಎಂದು ಹೇಳಿದರು.
ಸೈಫ್ ಮತ್ತು ಕರೀನಾ ಅವರ ಮದುವೆಯ ಸಂಗೀತಾ ಸಮಾರಂಭವು ತುಂಬಾ ಚಿಕ್ಕದಾಗಿತ್ತು. ತಾಜ್‌ನಲ್ಲಿ ಬಹಳ ಕಡಿಮೆ ಜನರಿದ್ದರು. ಅಭಿಷೇಕ್ ಮತ್ತು ಐಶ್ವರ್ಯಾ ಮದುವೆಯ ಸಂಗೀತಾ ಕಾರ್ಯಕ್ರಮವನ್ನು ಜುಹುವಿನಲ್ಲಿರುವ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಅದು ಒಂದು ಅದ್ಭುತ ಪಾರ್ಟಿಯಾಗಿತ್ತು. ಎರಡೂ ಖುಷಿ ಕೊಟ್ಟವು. ಅವರೆಲ್ಲರೂ ನನ್ನ ಸ್ನೇಹಿತರು ಎಂದಿದ್ದಾರೆ.
ಅಲ್ಲದೆ ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ಮತ್ತು ಸೈಫ್ ಪ್ಯಾರಿಸ್‌ನಲ್ಲಿ ಆ ಪಾರ್ಟಿಯನ್ನು ಆಯೋಜಿಸುತ್ತಿದ್ದರು. ಅಪರಿಚಿತರು ಬಂದು ಪ್ರದರ್ಶನ ನೀಡುವಂತಿರಲಿಲ್ಲ ಎಂದಿದ್ದಾರೆ. ಅಲ್ಲದೆ ಅವರೆಲ್ಲಾ ಎಷ್ಟು ಆತ್ಮೀಯರು ಎಂದರೆ ಅವರಲ್ಲಿ ಹೆಚ್ಚಿನವರು ನನ್ನ ಮದುವೆಗೂ ಹಾಜರಾಗಿದ್ದರು ಎಂದು ಹೇಳಿದ್ದಾರೆ. ಲಕ್ಷ್ಮಿ ಮಿತ್ತಲ್ ಅವರ ಮಗಳ ಮದುವೆಯಲ್ಲಿಯೂ ತಾವು ಪ್ರದರ್ಶನ ನೀಡಿದ್ದಾಗಿ ಅಕೀಲ್ ಹೇಳಿದ್ದಾರೆ.
ಅಂದ್ಹಾಗೆ ಅಭಿಷೇಕ್ ಮತ್ತು ಐಶ್ವರ್ಯಾ 2007ರಲ್ಲಿ ಬಹಳ ಸರಳ ಸಮಾರಂಭದಲ್ಲಿ ವಿವಾಹವಾದರು. ಇವರ ವಿವಾಹಕ್ಕೆ ಹೆಚ್ಚಿನ ಜನರನ್ನು ಆಹ್ವಾನಿಸಲಾಗಿಲ್ಲ. ಕೆಲವರು ಇದಕ್ಕೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು. ಉದಾಹರಣೆಗೆ ಶತ್ರುಘ್ನ ಸಿನ್ಹಾ ಅವರನ್ನು ಆಹ್ವಾನಿಸದ ಕಾರಣ ಮದುವೆಯ ಸಿಹಿತಿಂಡಿಗಳನ್ನು ಹಿಂತಿರುಗಿಸಿದರು. ಈ ಕುರಿತು ಐಶ್ವರ್ಯಾ ಮತ್ತು ಅಭಿಷೇಕ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮ ಕುಟುಂಬವು ಮದುವೆ ಸಮಾರಂಭವನ್ನು ತುಂಬಾ ಸರಳವಾಗಿ ಮಾಡಲು ಬಯಸಿದ್ದರು. ಅದಕ್ಕೆ ಕಾರಣ ನಮ್ಮ ಮನೆಯ ಹಿರಿಯರೊಬ್ಬರ ಆಸ್ಪತ್ರೆಯಲ್ಲಿದ್ದರು ಎಂದು ಹೇಳಿದ್ದರು.(ಏಜೆನ್ಸೀಸ್)