

ಪತಿ-ಪತ್ನಿಯ ನಡುವೆ ಕೆಲವೊಮ್ಮೆ ಸಣ್ಣಸಣ್ಣ ವಿಚಾರಕ್ಕೂ ಮಾತು ಬೆಳೆಯುತ್ತದೆ. ಪರಸ್ಪರ ಜಗಳ, ಹುಸಿಕೋಪ, ಸಣ್ಣ ಪ್ರತೀಕಾರಗಳೆಲ್ಲ ತೀರ ಸಹಜ. ಹಾಗೇ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಸ್ಯಾಂಡ್ವಿಚ್ ಸರಿಯಾಗಿ ಕತ್ತರಿಸಿ ಬಾಕ್ಸ್ಗೆ ಹಾಕಲಿಲ್ಲ ಎಂದು ಅಲವತ್ತುಕೊಂಡ ಪತಿಯ ವಿರುದ್ಧ ಪತ್ನಿ ಭರ್ಜರಿ ಪ್ರತೀಕಾರ ತೀರಿಸಿಕೊಂಡಿದ್ದಾಳೆ.
ಲಂಡನ್ನ ಲೋಜ್ ಎಂಬುವರು ಹೀಗೆ ಸುದ್ದಿಯಾದ ಮಹಿಳೆ. ಇವರಿಗೆ ಎರಡು ವರ್ಷದ ಮಗನಿದ್ದಾನೆ. ಬೆಳಗ್ಗೆದ್ದು ಮಗನನ್ನು ಸಂಭಾಳಿಸಬೇಕು. ಮನೆ ಕೆಲಸ ಮಾಡಬೇಕು..ತನ್ಮಧ್ಯೆ ಪತಿಯ ಬೇಕುಬೇಡಗಳನ್ನು ಗಮನಿಸಬೇಕು. ಅವನಿಗೆ ಊಟ, ತಿಂಡಿಗಳನ್ನು ಬಾಕ್ಸ್ಗೆ ಹಾಕಿ ಕೊಡಬೇಕು. ಇಷ್ಟೆಲ್ಲ ಮಾಡಿದರೂ ಪತಿಯ ಕೊಂಕು ಮಾತು ಕೇಳಿ ಬೇಸತ್ತ ಆಕೆ ಲಂಚ್ ಬಾಕ್ಸ್ನಲ್ಲಿ ಪತಿಯ ಮಾನ ಹರಾಜು ಹಾಕಿದ್ದಾರೆ.
ಅಂದು ಗಂಡನಿಗೆ ಕಳಿಸಿದ್ದ ಬಾಕ್ಸ್ನಲ್ಲಿ ಲೋಜ್ ಸ್ಯಾಂಡ್ವಿಚ್ ಕಳಿಸಿದ್ದರು. ಆದರೆ ಸ್ವಲ್ಪ ಹೊತ್ತಿನ ಬಳಿಕ ಆಕೆಯ ಪತಿ ಅದರ ಫೋಟೋವನ್ನು ಕಳಿಸಿ, ಸ್ಯಾಂಡ್ವಿಚ್ನ್ನು ತ್ರಿಕೋನಾಕಾರದಲ್ಲಿ ಕತ್ತರಿಸಲು ನಿನಗೆ ಗೊತ್ತಾಗಲಿಲ್ಲವಾ? ಹೀಗೆ ಬಾಯಿಗೆ ಹಾಕಿ ತಿನ್ನಲು ನಾನೇನು ಪ್ರಾಣಿನಾ ಎಂದು ಮೆಸೇಜ್ ಮಾಡಿದ್ದ.
ಅಷ್ಟಲ್ಲದೆ, ಅಂದೇ ಸಂಜೆ ಆಕೆ ತನ್ನ ಮಗ ಮತ್ತು ತಾಯಿಯೊಂದಿಗೆ ವಾಕ್ ಹೋದಾಗ ಅಚಾನಕ್ ಆಗಿ ಪತಿಯ ಆಫೀಸ್ನ ಬಾಸ್ ಸಿಕ್ಕಿದ್ದರು. ಅವರೂ ಕೂಡ ಈಕೆಯನ್ನು ಕಂಡ ತಕ್ಷಣ, ನಿಮ್ಮ ಗಂಡ ನೀವು ಕಳಿಸಿದ ಸ್ಯಾಂಡ್ವಿಚ್ ಬಗ್ಗೆ ತುಂಬ ಅಸಮಾಧಾನಗೊಂಡಿದ್ದರು. ಅರ್ಧ ಭಾಗ ಕತ್ತರಿಸಿ ಕೊಡಲಿಲ್ಲ..ಹಾಗೇ ಕೊಟ್ಟಿದ್ದಾಳೆ ಎಂದು ಅಲವತ್ತುಕೊಳ್ಳುತ್ತಿದ್ದರು ಎಂದು ಬಾಸ್ ಹೇಳಿದ್ದರು.
ಇದನ್ನೆಲ್ಲ ಕೇಳಿ ತೀವ್ರ ಅವಮಾನಿತರಾದ ಲೋಜ್ ಮೌನವಾಗಿಯೇ ಇದ್ದು ಸೇಡು ತೀರಿಸಿಕೊಂಡರು. ಯಾಕೆಂದರೆ ಆಕೆ ಪತಿಯ ಲಂಚ್ ಬಾಕ್ಸ್ನ್ನು ತುಂಬ ಆಸ್ಥೆಯಿಂದ ಸಿದ್ಧ ಪಡಿಸುತ್ತಿದ್ದರು. ಹೊರಗಡೆ ಊಟ, ತಿಂಡಿ ಮಾಡಿ, ಹಣ ಖರ್ಚು ಆಗಬಾರದು ಎಂದು ಎಷ್ಟೇ ಕೆಲಸವಿದ್ದರೂ ಪ್ರೀತಿಯಿಂದ ಮಾಡಿ ಕೊಟ್ಟುಕಳಿಸುತ್ತಿದ್ದರು. ಇದನ್ನೂ ಓದಿ: ಗಗನಮುಖಿ ಚಿನ್ನಕ್ಕೆ ಇನ್ನಷ್ಟು ಹೊಳಪು, ಬೆಳ್ಳಿಯದ್ದೂ ಅದೇ ಕಥೆ…
ಹಾಗೇ ಒಂದೆರಡು ದಿನ ಬಿಟ್ಟು ಮತ್ತೆ ಟಿಫಿನ್ ಬಾಕ್ಸ್ಗೆ ಸ್ಯಾಂಡ್ವಿಚ್ ಹಾಕಿದ್ದರು. ಅಂದು ಅದನ್ನು ಕಟ್ ಮಾಡುವುದನ್ನು ಮರೆಯಲಿಲ್ಲ. ಆದರೆ ಪತಿ ಹೇಳಿದ ಹಾಗೆ ತ್ರಿಕೋನಾಕಾರದಲ್ಲಿ ಕತ್ತರಿಸಲಿಲ್ಲ. ಬದಲಿಗೆ ಆತನ ಜನನೇಂದ್ರಿಯದ ಆಕಾರದಲ್ಲಿ ಕಟ್ ಮಾಡಿ, ಚೀಸ್ಗಳಿಂದ ಅಲಂಕರಿಸಿ ಕಳಿಸಿದ್ದರು. ಅಂದು ಬೆಳಗ್ಗೆ ಸುಮಾರು 10 ಗಂಟೆ ಹೊತ್ತಿಗೆ, ತನ್ನ ಸಹೋದ್ಯೋಗಿಗಳೊಂದಿಗೆ ಕುಳಿತು ತಿಂಡಿ ತಿನ್ನಲೆಂದು ಬಾಕ್ಸ್ ತೆಗೆದ ಪತಿಗೆ ಭರ್ಜರಿ ಶಾಕ್ ಕಾದಿತ್ತು. ಅವನ ಸಹೋದ್ಯೋಗಿಗಳೂ ಕೂಡ ಅದನ್ನು ನೋಡಿ ನಕ್ಕಿದ್ದರು. ಅಂಥ ಪತ್ನಿಯನ್ನು ಪಡೆದ ನೀನು ಲೆಜೆಂಡ್ ಬಿಡು ಎಂದು ಜೋಕ್ ಮಾಡಿದ್ದರು. ಇದನ್ನೂ ಓದಿ: ರಷ್ಯಾಕ್ಕೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್
ಅದಾದ ಬಳಿಕ ಒಂದಿನವೂ ತನ್ನ ಪತ್ನಿ ಕಳಿಸಿದ ತಿಂಡಿ, ಊಟದ ಬಗ್ಗೆ ಆತ ದೂರು ಹೇಳಲಿಲ್ಲ. ಲೋಜ್ ಮಾತ್ರ ಸುಮ್ಮನೆ ಇರಲಿಲ್ಲ, ತಾನು ಶಿಶ್ನದ ಆಕಾರದಲ್ಲಿ ಕತ್ತರಿಸಿದ ಸ್ಯಾಂಡ್ವಿಚ್ ಫೋಟೋವನ್ನು ಫೇಸ್ಬುಕ್ನಲ್ಲೂ ಹಾಕಿಕೊಂಡು, ಪತಿಗೆ ತಾವು ಬುದ್ಧಿ ಕಲಿಸಿದ್ದು ಹೀಗೆ ಎಂದು ಪೋಸ್ಟ್ ಮಾಡಿದ್ದರು. ಅದು ಕೂಡ ಸಿಕ್ಕಾಪಟೆ ವೈರಲ್ ಆಗಿದೆ. ಲೋಜ್ರಂತಹ ಸಾವಿರಾರು ಮಹಿಳೆಯರು ಇದೇ ಸರಿಯಾದ ಮಾರ್ಗವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)