

ಮೂಲ್ಕಿ: ಮೂಲ್ಕಿ ವಿಜಯ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಉದ್ಯಮಿ ರಂಗನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಹಾಗೂ ನಿರ್ದೇಶಕರಾಗಿ ಗಂಗಾಧರ ವಿ.ಶೆಟ್ಟಿ, ನರಸಿಂಹ ಪೂಜಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಅಶೋಕ್ ಕುಮಾರ್ ಚಿತ್ರಾಪು, ನಂಜುಂಡ ಆರ್.ಕೆ., ರಾಮ ನಾಯ್ಕ, ರಾಜೇಶ್ ಶೆಟ್ಟಿ ಉಳೆಪಾಡಿ, ಪದ್ಮಿನಿ ವಿಜಯ ಶೆಟ್ಟಿ ಶಿಮಂತೂರು, ಮಮತಾ ಡಿ.ಪೂಂಜ, ಪ್ರಭಾಕರ ದೇವಾಡಿಗ, ಸಚಿನ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿ, ಪ್ರಬಂಧಕ ಚಂದ್ರಕಾಂತ ಶೆಟ್ಟಿ ಉಪಸ್ಥಿತರಿದ್ದರು.
ಗುರುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿ, ನೂತನ ಅಧ್ಯಕ್ಷರ ಆಡಳಿತದಲ್ಲಿ ಸಮಾಜದ ಎಲ್ಲರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನಿಸಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಂಗನಾಥ ಶೆಟ್ಟಿ ಮಾತನಾಡಿ, ಸಂಘವು ಕಳೆದ ತಮ್ಮ ಆಡಳಿತದ ಅವಧಿಯಲ್ಲಿ ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ, ವಿಶ್ವನಾಥ್ ಬಪ್ಪನಾಡು, ಮೂಲ್ಕಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ದಿನೇಶ್ ಶೆಟ್ಟಿ ಹೊಸಲಕ್ಕೆ, ಉದಯ ಅಮೀನ್ ಮಟ್ಟು, ಕಿಶೋರ್ ಶೆಟ್ಟಿ ಬಪ್ಪನಾಡು, ಉದಯಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ವಕೀಲ ರವೀಶ್ ಕಾಮತ್, ರಾಜೇಶ್ ಅಮೀನ್ ಕಿಲ್ಪಾಡಿ, ಮಂಜುನಾಥ ಆರ್. ಕೆ.ಎಸ್.ರಾವ್ ನಗರ, ಮೂಲ್ಕಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶಿವರಾಮ್ ಜಿ.ಅಮೀನ್, ಮಂಜುನಾಥ ಶೆಟ್ಟಿ ಕಡವಿನಬಾಗಿಲು, ಸಾಧು ಅಂಚನ್ ಮಟ್ಟು, ವಿಜಯ ಶೆಟ್ಟಿ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.