

ಗುರುಪುರ: ಪ್ರತಿಯೊಂದು ಮಗುವಿನಲ್ಲಿ ಅದ್ಭುತ ಪ್ರತಿಭೆ ಸುಪ್ತವಾಗಿದ್ದು, ಸೂಕ್ತ ಶಿಕ್ಷಣದಿಂದ ಪ್ರತಿಭೆ ಅನಾವರಣಗೊಳ್ಳುತ್ತದೆ. ನಮ್ಮನ್ನು ನಾವು ತಿದ್ದಿಕೊಂಡಾಗ ನಮಗೆ ಮತ್ತು ಸವಾಜಕ್ಕೆ ಒಳ್ಳೆಯದಾಗುತ್ತದೆ. ಎಲ್ಲರೂ ಈ ರೀತಿ ಚಿಂತಿಸಿದಾಗ ಕೆಡುಕೆಂಬುದು ಇರುವುದಿಲ್ಲ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು. ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಮುನ್ನಡೆಸುವ ಸಹರಾ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ 2024ರ ಸಾಲಿನ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಅಸೋಸಿಯೇಶನ್‌ನ ಅಧ್ಯಕ್ಷ ಯು.ಪಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸ್ಥಳೀಯ ಉದ್ಯಮಿ ಪಿ.ಜಯರಾಮ ಕೃಷ್ಣ ಹಾಗೂ ಬಜ್ಪೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರೇವಣ್ಣ ಸಿದ್ದಪ್ಪ ಶುಭ ಹಾರೈಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡ್ಡೂರಿನ ಫೈವ್ ಸ್ಟಾರ್ ಕ್ಲಬ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕಿ ದೀಪ್ತಿ ಸ್ವಾಗತಿಸಿದರು. ಸಹರಾ ಆಂಗ್ಲ ವಾಧ್ಯಮ ಪಿ.ಯು. ಕಾಲೇಜಿನ ಪ್ರಾಂಶುಪಾಲ ಕೇಶವ ಎಚ್. ಪ್ರಸ್ತಾವಿಸಿದರು. ಗುರುಪುರ ಗ್ರಾ.ಪಂ. ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಫೈವ್ ಸ್ಟಾರ್ ಕ್ಲಬ್‌ನ ಅಧ್ಯಕ್ಷ ಹಬೀಬ್, ಕರೆಸ್ಪಾಂಡೆಂಟ್ ಎ.ಕೆ.ಇಸ್ಮಾಯಿಲ್, ಎಂಡಬ್ಲ್ಯೂಎ ಉಪಾಧ್ಯಕ್ಷ ಅಹ್ಮದ್ ಬಾವಾ ಅಂಗಡಿಮನೆ ಮತ್ತು ಎನ್.ಇ.ಮೊಹಮ್ಮದ್, ಎಂಡಬ್ಲ್ಯೂಎ ಕಾರ್ಯದರ್ಶಿ ಎನ್.ಇಸ್ಮಾಯಿಲ್, ಎಂಡಬ್ಲ್ಯೂಎ ಖಜಾಂಚಿ ಎ.ಕೆ.ಅಶ್ರಫ್, ಎಂಡಬ್ಲ್ಯೂಎ ಜತೆ ಕಾರ್ಯದರ್ಶಿ ನೂರೂಲ್ ಅಮೀನ್, ಪಿ.ಟಿ.ಎ. ಅಧ್ಯಕ್ಷ ವಿಶ್ವಾಂಭರ, ಪಿ.ಡಿ.ಎ. ಉಪಾಧ್ಯಕ್ಷೆ ಪ್ರಮೀಳಾ ಡಿ. ವಾರ್ಲ ಮೊದಲಾದವರಿದ್ದರು. ಶಿಕ್ಷಕಿಯರಾದ ಸ್ವಾತಿ, ಪ್ರಮೋದಾ, ಹರ್ಷಿತಾ ಮತ್ತು ಅಶ್ರುನ್ನಿಸಾ ನಿರೂಪಿಸಿದರು. ಶಿಕ್ಷಕಿ ವಂದನಾ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಮನಮೋಹಕ ನೃತ್ಯಗಳು ಪ್ರಸ್ತುತಗೊಂಡವು.
ದಿ.ಬಿ.ಎ.ಮೊದಿನ್ ದೂರದೃಷ್ಟಿಯಿಂದ ನಮ್ಮ ಸವಾಜ ಶಿಕ್ಷಣ ಪಡೆಯುವಂತಾಯಿತು. ಸಹರಾ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧರಿತ ಶಿಕ್ಷಣ ಸಿಗುತ್ತಿದೆ. ಶಾಲೆಗಿರುವ ಮೈದಾನದ ಕೊರತೆ ನೀಗಿಸುವಲ್ಲಿ ಸರ್ಕಾರಿ ಮಟ್ಟದಲ್ಲಿ ವಾತುಕತೆ ನಡೆಸಿ ಪೂರಕ ವ್ಯವಸ್ಥೆ ವಾಡುವೆ. - ಇನಾಯತ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.