

ಕಿನ್ನಿಗೋಳಿ: ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದಿಂದ ಐಕಳ ಪಾಂಪೈ ಕಾಲೇಜಿನಲ್ಲಿ ಫೆ. 8ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಪಾಂಪೈ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪಾಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ಓಸ್ವಾಲ್ಡ್ ಮೊಂತೆರೋ ಮಾತನಾಡಿ ಗ್ರಾಮೀಣ ಪ್ರದೇಶ ಐಕಳದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಭಿನಂದನೀಯ. ಈ ಸಮ್ಮೇಳನ ವಾದರಿ ಸಮ್ಮೇಳನವಾಗಲಿ ಎಂದರು.
ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಸಮ್ಮೇಳನ ಸಮಿತಿ ಅಧ್ಯಕ್ಷ ಪೃಥ್ವಿರಾಜ ಆಚಾರ್ಯ, ಕಾರ್ಯದರ್ಶಿ ಹಿಲ್ಡಾ, ಸಂಚಾಲಕ ಡಾ.ಪುರುಷೋತ್ತಮ ಕೆ.ವಿ. ತಾಲೂಕು ಕಾರ್ಯದರ್ಶಿ ಹೆರಿಕ್ ಪಾಯಸ್, ವೀಣಾ ಶಶಿಧರ್, ಹೋಬಳಿ ಕಸಾಪ ಅಧ್ಯಕ್ಷ ಜೊಸ್ಸಿ ಪಿಂಟೋ, ರೋಹನ್ ಡಿಕೋಸ್ತ, ಸ್ವರಾಜ್ ಶೆಟ್ಟಿ, ದೇವದಾಸ ಮಲ್ಯ, ಸಚ್ಚಿದಾನಂದ ಉಡುಪ, ಧನಂಜಯ ಶೆಟ್ಟಿಗಾರ್, ಸುಧಾಕರ ಶೆಟ್ಟಿ ಮತ್ತಿತರರಿದ್ದರು.