ವ್ಯಸನಮುಕ್ತ ಸಮಾಜ ನಿರ್ಮಾಣ

Mul_Free Society
Published on

ಮೂಲ್ಕಿ: ಸ್ವಾವಲಂಬನೆಯ ಜೀವನದೊಂದಿಗೆ, ವ್ಯಸನಮುಕ್ತ ಸವಾಜ ಕಟ್ಟುವ ಕೆಲಸವನ್ನು ಯುವಕರು ಮಾಡಬೇಕು ಎಂದು ಮನೋವೈದ್ಯಕೀಯ ಸವಾಲೋಚಕ ಶ್ರೀಪತಿ ಭಟ್ ಶಿಮಂತೂರು ಹೇಳಿದರು.

ಟೀಮ್ ಆದರ್ಶ ಸಂಜೀವಿನಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಲಿಂಗಪ್ಪಯ್ಯಕಾಡು ಚನ್ನಮಲ್ಲಿಕಾರ್ಜುನ ಮಠದ ಬಳಿ ಸಹಾಯಹಸ್ತ ನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಶಿಕ್ಷಣ ಕ್ಷೇತ್ರದ ಸಾಧಕರಿಗೆ ವಿದ್ಯಾರ್ಥಿವೇತನ ವಿತರಣೆ, ವಿವಿಧ ಸಂ ಸಂಸ್ಥೆಗಳಿಗೆ ಹಾಗೂ ಸಾಧಕರ ನೆಲೆಯಲ್ಲಿ ವಿಟ್ಠಲ್ ಎನ್.ಎಂ. ಅವರಿಗೆ ಗೌರವಾರ್ಪಣೆ ನಡೆಯಿತು.

ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್, ಉಪಾಧ್ಯಕ್ಷೆ ಲಕ್ಷ್ಮೀ, ಉದ್ಯಮಿ ಈಶ್ವರ ಕಟೀಲು, ಉದ್ಯಮಿ ಅಭಿಲಾಷ್ ಶೆಟ್ಟಿ ಕಟೀಲು, ಉದ್ಯಮಿ ಅಶ್ವಥ್ ಕೆ.ಪಣಪಿಲ, ಮೂಲ್ಕಿ ನ.ಪಂ. ನಾಮನಿರ್ದೇಶಿತ ಸದಸ್ಯ ಭೀವಾಶಂಕರ್ ಆರ್.ಕೆ., ಅಮೃತ ಸಂಜೀವಿನಿಯ ಪ್ರಮುಖರಾದ ವಸಂತ ಕುಲಾಲ್ ಪಣಪಿಲ, ಸುಧಾಮ ಫೌಂಡೇಶನ್ ಅಧ್ಯಕ್ಷ ಸುನೀಲ್ ಆಳ್ವ, ಅರಸು ಕಂಬಳ ಸಮಿತಿಯ ಉಪಾಧ್ಯಕ್ಷ ಮೋಹನ್ ಕೋಟ್ಯಾನ್, ಟೀಮ್ ಆದರ್ಶ ಸಂಜೀವಿನಿ ಸಂಸ್ಥೆಯ ಅಧ್ಯಕ್ಷ ಉಮೇಶ್ ಮತ್ತಿತರರಿದ್ದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net