ವಂದೇ ಭಾರತ್‌ಗೆ ಉತ್ತಮ ಪ್ರತಿಕ್ರಿಯೆ

Published on

ಕಾಸರಗೋಡು: ಹೆಚ್ಚುವರಿ ಬೋಗಿ ಅಳವಡಿಸಿರುವ ಕಾಸರಗೋಡು-ತಿರುವನಂತಪುರ ವಂದೇಭಾರತ್ ರೈಲು ಸೇವೆಯ ಆರಂಭದ ದಿನದಂದೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಹಿಂದೆ ಇದ್ದ 16 ಬೋಗಿಗಳಿಗೆ ನಾಲ್ಕು ಹೆಚ್ಚಿನ ಬೋಗಿ ಅಳವಡಿಸುವ ಮೂಲಕ ಈ ಸಂಖ್ಯೆ 20ಕ್ಕೇರಿತ್ತು. ಒಟ್ಟು 1440ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ತಿರುವನಂತಪುರದಿಂದ ಕಾಸರಗೋಡಿಗಿರುವ ಮೊದಲ ದಿನದ ಸಂಚಾರದಲ್ಲಿ ಶೇ.ನೂರು ಬುಕ್ಕಿಂಗ್ ಲಭಿಸಿತ್ತು. ಹದಿನಾರು ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ 1024 ಆಸನ ವ್ಯವಸ್ಥೆಯಿದ್ದು, 312 ಸೀಟುಗಳ ಹೆಚ್ಚಳವಾಗಿದೆ.

ಕಾಸರಗೋಡಿನಿಂದ ಕೊಟ್ಟಾಯಂ ಹಾದಿಯಾಗಿ ತಿರುವನಂತಪುರ ಸಂಚರಿಸುವ ಈ ರೈಲು ಬೆಳಗ್ಗೆ 5.15ಕ್ಕೆ ತಿರುವನಂತಪುರದಿಂದ ಹೊರಟು, ಮಧ್ಯಾಹ್ನ 1.20ಕ್ಕೆ ಕಾಸರಗೋಡು ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಕಾಸರಗೋಡಿನಿಂದ ಹೊರಟು, ರಾತ್ರಿ 10.40ಕ್ಕೆ ತಿರುವನಂತಪುರ ತಲುಪಲಿದೆ. ಮುಂದಿನ ಕೆಲವು ದಿನಗಳ ವರೆಗೆ ಟಿಕೆಟ್ ಬುಕ್ಕಿಂಗ್ ಈಗಾಗಲೇ ಪೂರ್ತಿಗೊಂಡಿರುವುದಾಗಿ ಮಾಹಿತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net