ಸ್ವಉದ್ಯೋಗದಿಂದ ಆತ್ಮಸ್ಥೈರ್ಯ

Bel_self-employment
Published on

ಬೆಳ್ತಂಗಡಿ: ಮಹಿಳೆಯರು ಇತರನ್ನು ಅವಲಂಬಿಸದೆ ಸ್ವಂತ ಉದ್ದಿಮೆ ಮಾಡಿದಾಗ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು. ಡಾ.ವೀರೇಂದ್ರ ಹೆಗ್ಗಡೆಯವರ ಮಾತಿನಂತೆ ನಾವು ಪದವಿ ಪಡೆದು ಇತರರ ಲೆಕ್ಕ ಬರೆಯುವ ಬದಲು ನಮ್ಮ ಲೆಕ್ಕ ನಾವೇ ಬರೆಯುವುದು ಶ್ರೇಷ್ಠ. ಪ್ರಸ್ತುತ ತರಬೇತಿಗಳು ಬಹುಬೇಡಿಕೆ ಇರುವ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವ ಸ್ವಉದ್ಯೋಗವಾಗಿದೆ ಎಂದು ಬೆಳ್ತಂಗಡಿ ತಾಪಂ ತರಬೇತುದಾರ ಜಯಾನಂದ ಪಿ.ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಯೋಜನೆಯಡಿ ಮೆಹಂದಿ ಡಿಸೈನ್ ಹಾಗೂ ಮದುಮಗಳ ಶೃಂಗಾರ ಮತ್ತು ಆರಿ ವರ್ಕ್ ಹಾಗೂ ಎಂಬ್ರಾಯಿಡರಿ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸೋಮನಾಥ್ ಕೆ., ಸಂಪನ್ಮೂಲ ವ್ಯಕ್ತಿಗಳಾದ ತುಳಸಿ, ಸೌಭಾಗ್ಯ ಉಪಸ್ಥಿತರಿದ್ದರು. ತರಬೇತಿಯಲ್ಲಿ 44ಮಂದಿ ಭಾಗವಹಿಸಿದ್ದರು. ತರಬೇತಿ ಸಂಯೋಜಕಿ ಜಯಶ್ರೀ ಸ್ವಾಗತಿಸಿ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net