More

  200 ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ ಶಕ್ತಿಮಾನ್ ಚಿತ್ರ ನಿರ್ಮಾಣ: ಮುಖೇಶ್ ಖನ್ನಾ

  ಮುಂಬೈ: ದೂರದರ್ಶನದಲ್ಲಿ 1997ರ ಸೆಪ್ಟೆಂಬರ್​ನಿಂದ ಹಿಡಿದು ಮಾರ್ಚ್ 2005ರವರೆಗೆ ಯಶಸ್ವಿಯಾಗಿ ಪ್ರಸಾರವಾಗಿದ್ದ ಶಕ್ತಿಮಾನ್ ಧಾರಾವಾಹಿ ಈಗಲೂ ಜನರ ಮನಸ್ಸಲ್ಲಿ ಹಾಗೆಯೇ ಉಳಿದಿದೆ. ಸೂಪರ್​ ಹೀರೊ ಕಲ್ಪನೆಯನ್ನು ಭಾರತೀಯ ಪ್ರೇಕ್ಷಕರಿಗೆ ನೀಡಿದ್ದ ಈ ಧಾರಾವಾಹಿಯನ್ನು ಚಲನಚಿತ್ರವಾಗಿ ನಿರ್ಮಾಣವಾಗಿ ಮಾಡಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು.

  ಇದನ್ನೂ ಓದಿ: ಜುಲೈ 7ರಂದು ಬಜೆಟ್​ ಮಂಡನೆ: ಸಿಎಂ ಸಿದ್ದರಾಮಯ್ಯ

  ಈ ಕುರಿತ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು. ಹಿರಿಯ ನಟ ಮುಖೇಶ್ ಖನ್ನಾ ತಮ್ಮ ಶಕ್ತಿಮಾನ್ ಅವತಾರವನ್ನು ಆಧರಿಸಿ ಮುಂಬರುವ ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಘೋಷಣೆಯಾಗಿ ಸಾಕಷ್ಟು ದಿನಗಳು ಕಳೆದಿದ್ದು, ಸಿನಿಮಾ ತಡವಾಗಲು ಕಾರಣವೇನು ಎಂಬ ಪ್ರಶ್ನೆಗೆ ಮುಖೇಶ್ ಉತ್ತರ ನೀಡಿದ್ದಾರೆ.

  ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲಾಗುವುದು. ಚಿತ್ರಕ್ಕೆ 200 ರಿಂದ 300 ಕೋಟಿ ವೆಚ್ಚವಾಗಲಿದ್ದು, ಸ್ಪೈಡರ್​ಮ್ಯಾನ್​ನ್ನು ನಿರ್ಮಿಸಿದ ಸೋನಿ ಪಿಕ್ಚರ್ಸ್‌ನಿಂದ ಈ ಚಿತ್ರದ ನಿರ್ಮಾಣ ಮಾಡಲಾಗುವುದು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದ್ದಾರೆ. ಸೋನಿ ಪಿಕ್ಚರ್ಸ್ ಕಳೆದ ವರ್ಷ ಈ ಚಿತ್ರದ ಬಗ್ಗೆ ಘೋಷಿಸಿತ್ತು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts