More

    ಲಿಫ್ಟ್​ ಕೊಡುವ ನೆಪದಲ್ಲಿ ಅಪ್ರಾಪ್ತ ವಯಸ್ಕನಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಮುಖಂಡ; ಆರೋಪಿ ಅರೆಸ್ಟ್​

    ಚೆನ್ನೈ: ಬೈಕ್​ನಲ್ಲಿ ಡ್ರಾಪ್​ ಕೊಡುವ ನೆಪದಲ್ಲಿ ಅಪ್ರಾಪ್ತ ವಯಸ್ಕ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಘಟನೆಯೂ ತಮಿಳುನಾಡಿನ ತಿರುವಳ್ಳೂರ್​ ಜಿಲ್ಲೆಯ ವಿಲ್ಲಿವಕ್ಕಂನಲ್ಲಿ ನಡೆದಿದ್ದು ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಬಾಲಚಂದ್ರನ್​(47)ನನ್ನು ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಹಿನ್ನಲೆ?

    ಅಪ್ರಾಪ್ತ ವಯಸ್ಕ ಬಾಲಕನಿಗೆ ಬಂಧಿತ ಆರೋಪಿ ಬಾಲಚಂದ್ರನ್​ ಲಿಫ್ಟ್​ ಕೊಡುವ ನೆಪದಲ್ಲಿ ಮೊದಲಿಗೆ ಬೈಕ್​ ಹತ್ತುವಂತೆ ಹೇಳಿದ್ದಾನೆ. ಬಳಿಕ ಆತನನ್ನು ಪಾಡಿ ಎಂಬ ಪ್ರದೇಶದಲ್ಲಿರುವ ಸೇತುವೆ ಬಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ಧಾನೆ.

    Harassment on boys
    ಸಾಂದರ್ಭಿಕ ಚಿತ್ರ

    ಇದನ್ನೂ ಓದಿ: ಯಾರನ್ನು ತೃಪ್ತಿಪಡಿಸಲು ಸಚಿವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ?: ಆರಗ ಜ್ಞಾನೇಂದ್ರ

    ಇದಾದ ಕೆಲ ಹೊತ್ತಿನ ಬಳಿಕ ಬಾಲಕ ಹೇಳಿದ ಜಾಗಕ್ಕೆ ಆರೋಪಿ ಲಿಫ್ಟ್​ ನೀಡಿದ್ದಾನೆ. ಈ ವೇಳೆ ಅಪ್ರಾಪ್ತ ವಯಸ್ಕ ಜೋರಾಗಿ ಅಳುತ್ತಿದ್ದನ್ನು ಗಮನಿಸಿದ ಸ್ಥಳೀಯರು ಏನಾಯಿತು ಎಂದು ವಿಚಾರಿಸಿದಾಗ ನಡೆದ ಘಟನೆಯನ್ನು ಸಂತ್ರಸ್ತ ಬಾಲಕ ಹೇಳಿಕೊಂಡಿದ್ದಾನೆ.

    ಈ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಡಿದ ಸಾರ್ವಜನಿಕರು ಗಾಡಿಯನ್ನು ಪರಿಶೀಲಿಸಿದಾಗ ಬಿಜೆಪಿ ಪಕ್ಷದ ಶಾಲು ಹಾಗೂ ಐಡಿ ಕಾರ್ಡ್​ ದೊರೆತಿದೆ. ಬಳಿಕ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬಾಲಚಂದ್ರನ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts