ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಆಯ್ಕೆ

Gur_Rafik
Published on

ಗುರುಪುರ: ಕುಪ್ಪೆಪದವಿನ ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ವಾರ್ಷಿಕ ಮಹಾಸಭೆ ಜ.18ರಂದು ಕೆ.ಉಂಞ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದು, ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಯು.ಪಿ. ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕೆ.ಸಲೀಂ, ಪದಾಧಿಕಾರಿಗಳಾಗಿ ಮುಹಮ್ಮದ್ ಬಶೀರ್ ಕೈಕಂಬ, ಶಾಕೀರ್ ಮಾಣಿಪಲ್ಲ, ಹಸನಬ್ಬ ಪಿ., ಹನೀಫ್ ಕುಳವೂರು ಹಾಗೂ ಸೆಂಟರ್ ಕಾರ್ಯಕಾರಿ ಸಮಿತಿಗೆ 13 ಸದಸ್ಯರು ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net