

ಗುರುಪುರ: ಇಲ್ಲಿನ ಗೋಳಿದಡಿಗುತ್ತು ಮನೆಯಲ್ಲಿ ಕಳೆದೆರಡು ದಿನಗಳಿಂದ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಸರಳ ಮತ್ತು ಸಂಭ್ರಮದ ‘ಗುತ್ತುದ ವರ್ಷದ ಪರ್ಬೊ’ ಸೋಮವಾರ ರಾತ್ರಿ ಸಂಪನ್ನಗೊಂಡಿತು.
ಶ್ರೀ ವೈದ್ಯನಾಥಾದ್ಯ ಪಂಚದೇವತೆ, ತುಳಸಿ ಆರಾಧನೆಯೊಂದಿಗೆ ಸೋಮವಾರ 2ನೇ ದಿನದ ಪರ್ಬೊ ಆರಂಭಗೊಂಡಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸತ್ಸಂಗ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗಿನಿಂದ ರಾತ್ರಿವರೆಗೆ ನೂರಾರು ಭಕ್ತರು ದೇವರ ಪ್ರಸಾದದೊಂದಿಗೆ ಊಟೋಪಚಾರ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಸಂಜೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‌ದಾಸ್ ಅವರಿಂದ ‘ಏಕ್ ಶಾಮ್ ರಫೀ ಕೆ ನಾಮ್’ ರಸಮಂಜರಿ ನಡೆಯಿತು.