

ಗುರುಪುರ: ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023-24ನೇ ಸಾಲಿನ ವಿಶೇಷ ಸಂಗೀತ ನೃತ್ಯ ಪರೀಕ್ಷೆಯ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ವಾಮಂಜೂರಿನ ಸಮೃದ್ಧಿ ಉಪಾಧ್ಯಾಯ ಶೇ.93 ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರು ವಾಮಂಜೂರಿನ ಅಮೃತೇಶ್ವರ ನಾಟ್ಯಾಲಯ ಸಂಸ್ಥೆ ನೃತ್ಯ ಗುರು ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ಅವರ ಶಿಷ್ಯೆ. ಮೂಡುಶೆಡ್ಡೆಯ ಶಾರದಾ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಸದಾಶಿವ ಉಪಾಧ್ಯಾಯ ಮತ್ತು ಶ್ರೀದೇವಿ ಉಪಾಧ್ಯಾಯ ದಂಪತಿ ಪುತ್ರಿ.