ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಆಯ್ಕೆ

Gur_Abdul Rahiman
Published on

ಗುರುಪುರ: ಮಲ್ಲೂರು ದೆಮ್ಮಲೆಯ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಮಾಜಿ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ದೆಮ್ಮಲೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಈ ಸಂದರ್ಭ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು, ಅಧ್ಯಕ್ಷರಾಗಿ ಎಂ.ಡಿ.ಅಬ್ದುಲ್ ರಹಿಮಾನ್ ದೆಮ್ಮಲೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ.ಎಚ್.ಹಸನ್ ಬಾವ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ದೆಮ್ಮಲೆ, ಜತೆ ಕಾರ್ಯದರ್ಶಿಯಾಗಿ ಎಂ.ಡಿ.ಉಬೈದುಲ್ಲ, ಮುಹಮ್ಮದ್ ಅಲಿ ಮಲ್ಲೂರು, ಕೋಶಾಧಿಕಾರಿಯಾಗಿ ಎಂ.ಜಿ.ಬಶೀರದ್ ಗಾಣೆಮಾರ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ 30 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net