ಲಿಪ್​ಲಾಕ್​ಗೆ ನಾನ್​ ರೆಡಿ ಎಂದ ಸ್ಟಾರ್​ ನಟಿ.. ತೀರ್ಮಾನದ ಹಿಂದಿದೆ ಆ ಒಂದು ಕಾರಣ..!

mrunal (1)
Published on

ಹೈದರಾಬಾದ್​: ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ತನ್ನ ಚೆಲುವು ಮತ್ತು ನಟನೆಯಿಂದ ದಕ್ಷಿಣದಲ್ಲೂ ಸ್ಟಾರ್​ ಸ್ಥಾನಕ್ಕೇರಿದ್ದರು. ಆದರೆ ಈ ಚೆಲುವೆ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ ನಂತರ,ಆಕೆ ಪಾಲಕರು ಪೋಷಕರು ಆಶ್ಚರ್ಯಗೊಂಡರು ಮಾತ್ರವಲ್ಲದೆ, ಉದ್ಯಮಕ್ಕೆ ಪ್ರವೇಶಿಸದಂತೆ ಷರತ್ತು ವಿಧಿಸಿದರು. ಹಾಗಾಗಿಯೇ ಹಲವು ಸಿನಿಮಾಗಳಲ್ಲಿ ಅವಕಾಶಗಳು ಕೈ ತಪ್ಪಿ ಹೋದವು ಎಂದು ಟಾಲಿವುಡ್​ನಲ್ಲಿ ಚರ್ಚೆ ನಡೆಯುತ್ತಿದೆ.

ಧಾರಾವಾಹಿಗಳ ಮೂಲಕ ಸಿನಿ ಕೆರಿಯರ್​ ಆರಂಭಿಸಿದ ಈ ಬಂಗಾಳಿ ಮೋಹನಾಂಗಿ ನಂತರ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಸೀತಾರಾಮಂನೊಂದಿಗೆ ತೆಲುಗಿನಲ್ಲಿ ಎಂಟ್ರಿ ಪಡೆದ ನಟಿ ಸರಣಿ ಆಫರ್‌ಗಳನ್ನು ಪಡೆಯುವ ಮೂಲಕ ಸ್ಟಾರ್ ನಟಿಯಾದರು.

ಮೃಣಾಲ್ ಹಿಂದಿಯಲ್ಲಿ ಸೂಪರ್ 30 ಮತ್ತು ಜೆರ್ಸಿಯಲ್ಲಿ ನಟಿಸಿದ್ದಾರೆ. ಆದರೆ ಅವರು ತೆಲುಗಿನಲ್ಲಿ ಸೀತಾರಾಮಂ ನ ಮಹಾಲಕ್ಷ್ಮಿ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡರು. ಬಳಿಕ ಹಾಯ್ ನಾನಾ ಮತ್ತು ಫ್ಯಾಮಿಲಿ ಸ್ಟಾರ್ ಮುಂತಾದ ಚಿತ್ರಗಳೊಂದಿಗೆ ಯಶಸ್ಸನ್ನು ಪಡೆದರು.

ಈ ನಡುವೆ ತಮಿಳಿನ ಹೀರೋ ಶಿವ ಕಾರ್ತಿಕೇಯನ್ ಎದುರು ನಟಿಸುವ ಅವಕಾಶವನ್ನು ಕೈ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಸಾಂಸಾರಿಕ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಿದ್ದ ನಟಿ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುವುದಕ್ಕೆ ಪಾಲಕರಿಂದ ವಿರೋಧ ವ್ಯಕ್ತವಾದ ನಂತರ ಅಂತಹ ದೃಶ್ಯಗಳಲ್ಲಿ ನಟಿಸದಿರಲು ನಿರ್ಧರಿಸಿದಳು.

ನನ್ನ ಇಂತಹ ತೀರ್ಮಾನದಿಂದಲೇ ದೊಡ್ಡ ಚಿತ್ರಗಳಲ್ಲಿ ಅವಕಾಶ ಕಳೆದುಕೊಳ್ಳಬೇಕಾಯಿತು. ಲಿಪ್​ ಲಾಕ್​ ದೃಶ್ಯಗಳಿದ್ದ ಆ ಚಿತ್ರಗಳಲ್ಲಿ ನಟಿಸಿದ್ದರೆ ಇವತ್ತು ಪ್ಯಾನ್ ಇಂಡಿಯಾ ಹೀರೋಯಿನ್ ಆಗುತ್ತಿದ್ದೆ ಎಂದು ಮೃಣಾಲ್​ ಬೇಸರ ವ್ಯಕ್ತಪಡಿಸುತ್ತಾರೆ.

ಆದರೆ ಈಗ ಟ್ರೆಂಡ್​ಗೆ ತಕ್ಕಂತೆ ಲಿಪ್ ಲಾಕ್​ ಇರುವ ಚಿತ್ರಗಳಲ್ಲೂ ನಟಿಸಬೇಕಿದೆ. ನನ್ನ ಆ ನಿರ್ಧಾರದಿಂದ ದೊಡ್ಡ ಆಫರ್‌ಗಳು ತಪ್ಪಿ ಹೋಗಿವೆ ಎಂದು ಮೃಣಾಲ್ ಹೇಳಿದ್ದು, ಚುಂಬಕ ದೃಶ್ಯಗಳಲ್ಲಿ ನಟಿಸುವುದು ತನ್ನ ವೃತ್ತಿ ಜೀವನಕ್ಕೆ ಅಗತ್ಯವಾಗಿದೆ ಎಂದು ಪಾಲಕರ ಮನವೊಲಿಸಿದ್ದೇನೆ ಎಂದು ಮೃಣಾಲ್​ ಹೇಳಿದ್ದು, ಮುಂದೆ ಯಾವ ರೀತಿಯಲ್ಲಿ ಅವಕಾಶಗಳನ್ನು ಈ ನಟಿ ಪಡೆಯುತ್ತಾಳೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net