More

    ಬಂಜಾರ ಸಂಸ್ಕೃತಿ ಕುರಿತ ಭಾಯ್​ ಚಿತ್ರದಲ್ಲಿ ಯುವ ಮತ್ತು ಪೂಜಾ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    ಬಂಜಾರ ಸಮುದಾಯದ ಆಚರಣೆ, ಸಂಪ್ರದಾಯ, ಸಂಸ್ಕೃತಿಗಳ ಕುರಿತ ಚಿತ್ರವೊಂದು ಸದ್ದಿಲ್ಲದೇ ರೆಡಿಯಾಗಿದೆ. ಹೆಸರು ‘ಭಾಯ್’. ಕೆಲ ಚಿತ್ರಗಳಲ್ಲಿ ಜೂನಿಯರ್ ಕಲಾವಿದನಾಗಿ, ಗ್ಯಾಂಗ್‌ಸ್ಟಾರ್ ಪಾತ್ರಗಳಲ್ಲಿ ನಟಿಸಿರುವ ಬೆಳಗಾವಿ ಮೂಲದ ಯುವ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ಇತ್ತೀಚೆಗಷ್ಟೆ ಖಳನಟ ಚಲುವರಾಜ್ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

    ಇದನ್ನೂ ಓದಿ : ಪ್ಲೀಸ್​ ಹೆಲ್ಪ್​ ಮಾಡಿ… ಮುಂಬೈ ಪೊಲೀಸರನ್ನು ಪರಿಪರಿಯಾಗಿ ಬೇಡಿಕೊಂಡ ಮಾಜಿ ನೀಲಿತಾರೆ ಸನ್ನಿ ಲಿಯೋನಿ..!

    ಬಂಜಾರ ಸಂಸ್ಕೃತಿ ಕುರಿತ ಭಾಯ್​ ಚಿತ್ರದಲ್ಲಿ ಯುವ ಮತ್ತು ಪೂಜಾ

    ನಟ, ನಿರ್ದೇಶಕ ಯುವ, ‘ಇದು ಮಾಸ್ ಸಿನಿಮಾ. ಬಂಜಾರ ಸಮುದಾಯದ ಸಂಪ್ರದಾಯಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಮಾಸ್ ಆಗಿದ್ದರೂ ಕುಟುಂಬದವರೆಲ್ಲರೂ ನೋಡುವ ಚಿತ್ರ’ ಎಂದು ಮಾಹಿತಿ ನೀಡುತ್ತಾರೆ. ಪೊಲೀಸ್ ಇಲಾಖೆಯಲ್ಲಿದ್ದ ಸುರೇಶ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ‘ಕಥೆ ಬರೆಯಲು ಅಪ್ಪು ಸರ್ ಸ್ಪೂರ್ತಿ. ಅವರಿಗೆ ಹೀಗೊಂದು ಕಥೆ ಬರೆಯುತ್ತೇನೆ ಎಂದಾಗ, ಹುರಿದುಂಬಿಸಿದ್ದರು’ ಎಂದರು.

    ಇದನ್ನೂ ಓದಿ : ‘ಗರಡಿ’ ರಿಲೀಸ್​; ಮಲ್ಟಿಪ್ಲೆಕ್ಸ್​ಗಳಿಗೆ ಖಡಕ್​ ಎಚ್ಚರಿಕೆ ಕೊಟ್ಟ ಬಿ.ಸಿ. ಪಾಟೀಲ್

    ಬಂಜಾರ ಸಂಸ್ಕೃತಿ ಕುರಿತ ಭಾಯ್​ ಚಿತ್ರದಲ್ಲಿ ಯುವ ಮತ್ತು ಪೂಜಾ

    ನಾಯಕಿ ಪೂಜಾ ಇಲ್ಲಿ ವಿದೇಶಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು, ‘ಬಂಜಾರ ಕಲೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಭಾರತಕ್ಕೆ ಬಂದಿರುತ್ತೇನೆ. ಮುಂದೆ ಏನೆಲ್ಲಾ ಆಗುತ್ತೆ ಎಂಬುದನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ’ ಎಂದು ಹೇಳಿಕೊಂಡರು. ‘ಭಾಯ್’ ಇದೇ ತಿಂಗಳ 17ರಂದು ರಿಲೀಸ್ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts