More

    ಪ್ಲೀಸ್​ ಹೆಲ್ಪ್​ ಮಾಡಿ… ಮುಂಬೈ ಪೊಲೀಸರನ್ನು ಪರಿಪರಿಯಾಗಿ ಬೇಡಿಕೊಂಡ ಮಾಜಿ ನೀಲಿತಾರೆ ಸನ್ನಿ ಲಿಯೋನಿ..!

    ಬಾಲಿವುಡ್ ನಟಿ ಸನ್ನಿ ಲಿಯೋನ್ ಮನೆಯ ಕೆಲಸದಾಕೆಯ ಮಗಳು ಕಾಣೆಯಾಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ 9 ವರ್ಷದ ಮಗು ಮುಂಬೈನ (ಜೋಗೇಶ್ವರಿಯಿಂದ ನಾಪತ್ತೆಯಾಗಿರುವ ಕುರಿತು ಹೇಳಿಕೊಂಡಿದ್ದರು
    ಒಂಬತ್ತು ವರ್ಷದ ಮಗು ಅನುಷ್ಕಾ ಕಿರಣ್ ಮೋರೆ (Anushka Kiran More) ಗುರುವಾರ ಸಂಜೆಯಿಂದ ಕಾಣೆಯಾಗಿದ್ದಾರೆ.

    ಜೋಗೇಶ್ವರಿ ವೆಸ್ಟ್ ನ ಬೆಹ್ರಾಮ್ ಬೇಗ್ ನಿಂದ ನಾಪತ್ತೆಯಾಗಿರುವ ಮಗುವನ್ನು ಹುಡುಕಿಕೊಟ್ಟರೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.


    ಮುಂಬೈ ಪೊಲೀಸ್ ರಿಗೆ ಅವರು ಮಾಹಿತಿ ನೀಡಿದ್ದು, ಅನುಷ್ಕಾಳನ್ನು ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಮನೆಗೆ ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಮುಂಬೈನಲ್ಲಿ ಅನೇಕ ಮಕ್ಕಳು ಕಾಣೆಯಾಗುತ್ತಿದ್ದಾರೆ. ಮುಂಬೈವೊಂದರಲ್ಲೇ ಮುನ್ನೂರಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿರುವ ಪ್ರಕರಣವೂ ದಾಖಲಾಗಿದೆ.


    ಇದೀಗ ಮುಂಬೈ ಪೊಲೀಸರು ಕಾಣೆಯಾಗಿದ್ದ ಮಗುವನ್ನು ಹುಡುಕಿಕೊಟ್ಟಿದ್ದು, ಸನ್ನಿ ಲಿಯೋನ್​ ಮುಂಬ್​​ ಪೊಲೀಸರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ನಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ. ಮುಂಬೈ ಪೊಲೀಸರಿಗೆ ಧನ್ಯವಾದಗಳು. ಮಗು ನಾಪತ್ತೆಯಾದ 24 ಗಂಟೆಗೊಳಗಾಗಿ ನಾವು ಮರಳಿ ಪಡೆದಿದ್ದೇವೆ.

    ನನ್ನ ಒಂದು ಪೋಸ್ಟನ್ನ ಹಂಚಿಕೊಂಡ ಅಷ್ಟೂ ಜನರಿಗೆ ಧನ್ಯವಾದ ಎಂದು ಇನ್ಸ್​​ಟಾಗ್ರಾಂ ಪೋಸ್ಟ್​​​ನಲ್ಲಿ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts