'ಗರಡಿ' ರಿಲೀಸ್​; ಮಲ್ಟಿಪ್ಲೆಕ್ಸ್​ಗಳಿಗೆ ಖಡಕ್​ ಎಚ್ಚರಿಕೆ ಕೊಟ್ಟ ಬಿ.ಸಿ. ಪಾಟೀಲ್

Untitled design (1)
Published on

ಬೆಂಗಳೂರು: ವಿಕಟಕವಿ, ನಿರ್ದೇಶಕ ಯೋಗರಾಜ್​ ಭಟ್​ ನಿರ್ದೇಶನದಲ್ಲಿ ಮೂಡಿಬಂದ 'ಗರಡಿ' ಸಿನಿಮಾ ಇಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಚಿತ್ರ ಥಿಯೇಟರ್​ಗೂ ಬರುವ ಮುನ್ನ ಪ್ರೀಮಿಯರ್​ ಶೋ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ನಟ ಬಿ.ಸಿ. ಪಾಟೀಲ್​ ಮಲ್ಟಿಪ್ಲೆಕ್ಸ್​ಗಳಿಗೆ ಖಡಕ್ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ.

'ಗರಡಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿ.ಸಿ. ಪಾಟೀಲ್ ಮಾತನಾಡಿ​, "ಸಿನಿಮಾದ ಬಗ್ಗೆ ಈಗಾಗಲೇ ಎಲ್ಲರೂ ಮಾತನಾಡಿದ್ದಾರೆ. ಹೀಗಾಗಿ ನಾನೇನು ಹೆಚ್ಚು ಹೇಳಲು ಹೋಗಲ್ಲ. ಯಾಕಂದ್ರೆ ಅವರೆಲ್ಲಾ ಹೇಳಿದ ಮೇಲೆ ಅದು ಅಂತಿಮ ತೀರ್ಪು ಆಗುತ್ತದೆ" ಎಂದರು.

"ಒಂದು ಬಹಳ ನೋವಿನ ಸಂಗತಿ ಏನಂದರೆ, ನಮ್ಮ ಕನ್ನಡ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಈಗಾಗಲೇ ನಮಗೆ ಕೊಟ್ಟ ಶೋಗಳನ್ನು ಭಾನುವಾರ ಹಿಂದಿ ಚಿತ್ರ ಬರಲಿದೆ ಎಂದು ಕಡಿತಗೊಳಿಸುವ ಪ್ರಯತ್ನವನ್ನು ಐನಾಕ್ಸ್ ಹಾಗೂ ಪಿವಿಆರ್​ ಮಾಡುತ್ತಿದೆ" ಎಂದು ಹೇಳಿದರು.

"ನಾವು ಈಗಾಗಲೇ ಅವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಹಿಂದಿಗೋಸ್ಕರ ಕನ್ನಡ ಸಿನಿಮಾ ತೆಗೆದರೆ ಪರಿಣಾಮ ಕೆಟ್ಟದಾಗಿರಲಿದೆ ಎಂದು ಹೇಳಿದ್ದೇವೆ. ಹಾಗಾಗಿ ಕನ್ನಡ ಚಿತ್ರಕ್ಕೆ ಕರ್ನಾಟಕದಲ್ಲಿ ಪ್ರಾಶಸ್ತ್ಯ ಕೊಡಬೇಕು. ಬೇರೆ ಭಾಷೆಯ ಸಿನಿಮಾಗಳು ಬೇಡ ಎನ್ನುವುದಿಲ್ಲ, ಯಾಕಂದರೆ ನಾವು ಕನ್ನಡಿಗರು ಸಹೃದಯಿಗಳು. ಆದ್ರೆ, ನಮ್ಮ ಸಿನಿಮಾಗೆ ತೊಂದರೆಯಾದರೆ ಅದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಈ ಮೂಲಕ ಹೇಳ್ತೀನಿ" ಎಂದು ಬಿ.ಸಿ. ಪಾಟೀಲ್ ​ಮಲ್ಟಿಪ್ಲೆಕ್ಸ್​ಗಳಿಗೆ ಎಚ್ಚರಿಕೆ ನೀಡಿದರು.

ವೀಡಿಯೋ ನೋಡಿ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net