

Breast Milk: ಇತ್ತೀಚಿನ ದಿನಗಳಲ್ಲಿ ನೀವು ಏನನ್ನೂ ಬೇಕಾದರೂ ಖರೀದಿಸಬಹುದು ಅವುಗಳಲ್ಲಿ ತಾಯಿಯ ಎದೆ ಹಾಲು ಕೂಡ ಒಂದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಎದೆಹಾಲು ಮಾರಾಟ ಹೆಚ್ಚುತ್ತಿದ್ದು, ತಮ್ಮ ಶಿಶುಗಳಿಗೆ ಹಾಲುಣಿಸುವ ಆಯ್ಕೆಯನ್ನು ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಈ ಪ್ರವೃತ್ತಿ ವೇಗವನ್ನು ಪಡೆಯುತ್ತಿದ್ದಂತೆ, ಕುತೂಹಲಕಾರಿ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಇನ್ನು ಅಲ್ಲಿನ ಅನೇಕ ಮಹಿಳೆಯರು ತಮ್ಮ ಎದೆ ಹಾಲನ್ನು ಮಾರಾಟ ಮಾಡುವುದರ ಜೊತೆಗೆ ತಿಂಗಳಿಗೆ ಸುಮಾರು 87000 ರೂ ವರೆಗೆ ಸಂಪಾದಿಸುತ್ತಿದ್ದಾರೆ.
ವಾಟ್ಸ್ಆಪ್ ಹಾಗೂ ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಎದೆ ಹಾಲು ಖರೀದಿ ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎದೆಹಾಲು ನೀಡುವುದರಿಂದ ಶಿಶುಗಳಿಗೆ ಉತ್ತಮ ಆರೋಗ್ಯ ಹಾಗೂ ಪ್ರಯೋಜನಗಳನ್ನು ಪಡೆಯಬಹುದು ಎಂದು ನಂಬಿದ್ದಾರೆ.
ಎದೆಹಾಲು ತಾಯಿ ಹಾಗೂ ಮಗುವಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ರೋಗನಿರೋಧಕ ಶಕ್ತಿ ಮತ್ತು ಬೆಳವಣಿಗೆಯನ್ನು ಬೆಂಬಲಿಸುವ ಅಗತ್ಯ ಪೋಷಕಾಂಶಗಳು, ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ.
ಶಿಶುಗಳಿಗೆ ಎದೆ ಹಾಲು ಉಣಿಸುವುದರಿಂದ ದೈಹಿಕ, ಹಾಗೂ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಯಂದಿರು ಎದೆ ಹಾಲುಣಿಸುವುದರಿಂದ ಅವರಿಗೆ ಪ್ರಸವಾನಂತರದ ಚೇತರಿಕೆ ನೀಡುತ್ತದೆ. ಹಾಗೂ ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
* ಎದೆಹಾಲು ಹಂಚಿಕೊಳ್ಳುವುದು ನಿರುದ್ರಪವಾಗಿ ಕಂಡುಬಂದರೂ ಅದು ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು
* ಎಚ್ಐವಿ, ಹೆಪಟೈಟಸ್ ಬಿ, ಸಿ ಮತ್ತು ವಿವಿಧ ಸೋಂಕುಗಳು ಎದೆಹಾಲಿನ ಮೂಲಕ ಹರಡುತ್ತದೆ
* ಎದೆಹಾಲಿನ ಸಂಗ್ರಹಣೆಯು ಬ್ಯಾಕ್ಟೀರಿಯಾದ ಮಾಲಿನ್ಯಕ್ಕೆ ಕಾರಣವಾಗಬಹುದು ಇದು ಶಿಶುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
* ಹೆಚ್ಚುವರಿಯಾಗಿ ಕೆಲವು ಮಾರಾಟಗಾರರು ಹಾಲಿನ ಉತ್ಪಾದನೆ ಹೆಚ್ಚಿಸಲು ಅನಾರೋಗ್ಯಕರ ಅಭ್ಯಾಸಗಳಲ್ಲಿ ತೊಡಗಬಹುದು
* ಸರಿಯಾದ ವೈದ್ಯಕೀಯ ಮೇಲ್ವಿಚಾರಣೆ ಹಾಗೂ ಪ್ರಯೋಗಾಲಯ ಇಲ್ಲದೆ, ಖರೀದಿಸುವುದು ಹಾಗೂ ಮಾರಾಟ ಮಾಡುವುದು ಅಪಾಯಕಾರಿಯಾಗಿದೆ (ಏಜೆನ್ಸೀಸ್)