

Amitabh Bachchan: ನಟ ಅಮಿತಾಭ್ ಬಚ್ಚನ್ ಇತ್ತೀಚೆಗೆ ಭಾರತೀಯ ನೌಕಾಪಡೆಯ ವಿಧ್ವಂಸಕ ನೌಕೆಗೆ ಭೇಟಿ ನೀಡಿ, ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಟಿಪ್ಪಣಿಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ನೌಕಾಪಡೆಯ ಯುದ್ಧನೌಕೆಯಲ್ಲಿ ನಿಂತು ಕಪ್ಪು ಬ್ಲೇಜರ್, ಮ್ಯಾಚಿಂಗ್ ಪ್ಯಾಂಟ್ ಹಾಗೂ ಬಿಳಿ ಸ್ನೀಕರ್ಸ್ ಧರಿಸಿ, ವಿಭಿನ್ನ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನೀವು ನಮ್ಮ ಪಡೆಗಳ ಶಕ್ತಿಯ ಬಗ್ಗೆ ಕೇಳಿದ್ದೀರಿ.. ನಮಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ನಮ್ಮ ಸೈನಿಕರ ಶೌರ್ಯದ ಕಥೆಗಳನ್ನು ಕೇಳಿದ್ದೀರಿ .. ನೀವು ಮತ್ತು ನಾನು ಶಾಂತಿಯುತವಾಗಿ ನಿದ್ರಿಸಲು ಹೋರಾಡುವ ಶಸ್ತ್ರಸಜ್ಜಿತ ಹಡಗುಗಳ ಅನ್ವೇಷಿಸುವುದನ್ನು ಕಲಿಯಿರಿ. ಇದರಿಂದ ನಾನು ಮತ್ತೆ ನೀವು ಶಾಂತಿಯುತ ನಿದ್ರೆಯನ್ನು ಪಡೆಯಬಹುದು ಎಂದು ಬರೆದುಕೊಂಡಿದ್ದಾರೆ.
ಭಾರತೀಯ ನೌಕೆಯ ಸಶಸ್ತ್ರ ಪಡೆಗಳ ಕಾರ್ಯವೈಕರಿಯನ್ನು ಗಮನಿಸಿದರೆ ವರ್ಣಿಸಲು ಪದಗಳೇ ಸಾಲುತ್ತಿಲ್ಲ. ನಮಗಾಗಿ ಹೋರಾಡುವಂತ ಮಹಿಳೆಯರು ಹಾಗೂ ಪುರುಷರನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ನಮಗೆ ಶಾಂತಿ ನೀಡಲು ಸಮವಸ್ತ್ರ ಧರಿಸಿ ಹೋರಾಟ ನಡೆಸುತ್ತಾರೆ. ರಾಷ್ಟ್ರಕ್ಕಾಗಿ ಅವರು ಅಪರಿಮಿತ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸುಗಮ ಸಂಗೀತ ಕಲಾ ತರಬೇತಿಗೆ ಚಾಲನೆ
ಈ ವೇಳೆ ಅಮಿತಾಬ್ ಇಂದು ನಾನು ಅತ್ಯುನ್ನತ ಕಲಿಕೆಯೊಂದಿಗೆ ಹಿಂತಿರುಗುತ್ತಿದ್ದೇನೆ. ನಿನ್ನೆಯಿಂದ ಮಾರ್ಗದರ್ಶಿತ ಕೈ ನನ್ನನ್ನು ನಮ್ಮ ಪಡೆಗಳ ಅಂಶಕ್ಕೆ ಕರೆತರುತ್ತಿದ್ದಾರೆ ಎಂದು ಬಹುತೇಕವಾಗಿ ಅನಿಸುತ್ತಿದೆ. ನಾನು ಕಲಿತಿದ್ದೇನೆ, ನನಗೆ ಗೊತ್ತಿದೆ, ನಾನು ಹೆಮ್ಮೆಯಲ್ಲಿದ್ದೇನೆ, ನಾನು ಭಾರತದ ನಾಗರೀಕ, ನಮಗಾಗಿ ತಮ್ಮ ಸರ್ವಸ್ವವನ್ನು ನೀಡುವವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಭಾರತ್ ಮಾತಾಕಿ ಜೈ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)