ಗಾಯಾಳುವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್​ಗೆ ಬೆಂಕಿ ಇಟ್ಟ ಬಂಡುಕೋರರು; ಮೂವರು ಸಜೀವ ದಹನ

Ambulance Burnt
Published on

ಇಂಫಾಲ್: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮುಂದುವರೆದಿದ್ದು, ಪ್ರತಿಭಟನಾ ನಿರತರು ಎಂಟು ವರ್ಷದ ಬಾಲಕ, ಆತನ ತಾಯಿ ಸೇರಿದಂತೆ ಮೂವರನ್ನು ಜೀವಂತ ಸುಟ್ಟು ಹಾಕಿರುವ ಘಟನೆ ರಾಜ್ಯ ರಾಜಧಾನಿ ಇಂಫಾಲ್​ನಲ್ಲಿ ನಡೆದಿದೆ.

ಘಟನೆಯೂ ಭಾನುವಾರ ಸಂಜೆ ಇಂಫಾಲ್​ನ ಐರೋಸೆಂಬಾ ಎಂಬ ಪ್ರದೇಶದಲ್ಲಿ ನಡೆದಿದ್ದು, ಗಲಭೆಯಲ್ಲಿ ಗುಂಡೇಟು ತಿಂದಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.

Burnt Ambulance

ಸಜೀವ ದಹನ

ಮೃತರನ್ನು ಟಾನ್ಸಿಂಗ್ ಹ್ಯಾಂಗ್ಸಿಂಗ್ (8). ಮೀನಾ(45), ಲಿಡಿಯಾ ಲೌರೆಂಬಮ್​(37) ಎಂದು ಗುರುತಿಸಲಾಗಿದ್ದು, ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿದ್ದ ಆಶ್ರಯ ಪಡೆದಿದ್ದ ಬಾಲಕ ಹೊರಬಂದ ವೇಳೆ ಆತನ ಮೇಲೆ ದಾಳಿಯಾಗಿದೆ. ಕೂಡಲೇ ಅಧಿಕಾರಿಗಳು ಗಾಯಾಳುವನ್ನು ಆಂಬ್ಯುಲೆನ್ಸ್​ ಮೂಲಕ ಕಳುಹಿಸಿಕೊಟ್ಟಿದ್ದಾರೆ.

ಕೆಲ ದೂರದವರೆಗೆ ಆಂಬ್ಯುಲೆನ್ಸ್​ ಬೆಂಗಾವಲಾಗಿ ಬಂದ ಅಸ್ಸಾಂ ರೈಫಲ್​ ಸಿಬ್ಬಂದಿ ಸೂಕ್ಷ್ಮ ಪ್ರದೇಶ ದಾಟಿದ ಬಳಿಕ ವಾಪಸ್​ ಆಗಿದೆ. ರೈಫೈಲ್ಸ್ ಭದ್ರತಾ ವಾಹನ ಮರಳಿದ ಕೆಲ ಹೊತ್ತಲ್ಲೇ ಆಂಬ್ಯುಲೆನ್ಸ್ ಮೇಲೆ ದಾಳಿಯಾಗಿದ್ದು ಎಂಟು ವರ್ಷದ ಬಾಲಕ, ಆತನ ತಾಯಿ ಸೇರಿದಂತೆ ಮೂವರನ್ನು ಸಜೀವ ದಹನವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net