ಪ್ರೀತಿಗೆ ಅಡ್ಡಿ, ಪ್ರಿಯಕರನ ನೆರವಿನಿಂದ 4 ವರ್ಷದ ಮಗನ ಪ್ರಾಣ ತೆಗೆದ ತಾಯಿ..

pune mother accuse
Published on

ಪುಣೆ: ತಾಯಿಯೊಬ್ಬಳು ಪ್ರಿಯಕರನ ಸಹಾಯದಿಂದ ನಾಲ್ಕು ವರ್ಷದ ಬಾಲಕನ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದ ಪುಣೆ ಬಳಿ ನಡೆದಿದೆ.

ಮೃತನನ್ನು ಶಂಕರ ಪವಾರ್ ಎಂದು ಗುರುತಿಸಲಾಗಿದ್ದು, ಆತನ ತಾಯಿ ರೇಣು ಮತ್ತು ಆಕೆಯ ಗೆಳೆಯ ಉಮೇಶ್ ಸಾಳುಂಕೆ ಎಂಬುವರೇ ಆರೋಪಿಗಳಾಗಿದ್ದಾರೆ. ಬಾಲಕನ ಸಾವಿನ ಕುರಿತು ರೇಣು ಪವಾರ್ ಅವರ ಸೋದರ ಸಂಬಂಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಜೆಜೂರಿ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಪತ್ನಿಯ ಖಾಸಗಿ ಕ್ಷಣಗಳ ವಿಡಿಯೋ ರೆಕಾರ್ಡ್ ಮಾಡಿ, ಶೇರ್ ಮಾಡಿದ ಪತಿ..

ಮಾಡ್ಲಿಂಬ್‌ನಲ್ಲಿ ವಾಸವಾಗಿರುವ ರೇಣು ಪವಾರ್ ಮತ್ತು ಉಮೇಶ್ ಸಾಳುಂಕೆ ಸಂಬಂಧ ಹೊಂದಿದ್ದರು. ಈ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗನನ್ನು ಒಂದೂವರೆ ತಿಂಗಳ ಹಿಂದೆ ಇಬ್ಬರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಕೊಲೆಯ ನಂತರ ಶವವನ್ನು ಸೀರೆಯಲ್ಲಿ ಸುತ್ತಿ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸಿ ಪುರಂದರ ತಾಲೂಕಿನ ಭುಲೇಶ್ವರ ಘಾಟ್‌ನಲ್ಲಿ ಎಸೆದಿದ್ದರು.

ಆ ಬಳಿಕ ಈ ಕುರಿತು ದೂರು ದಾಖಲಾಗಿತ್ತು. ಅದರಂತೆ ಜೆಜೂರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಘಾಟಿಗೆ ಎಸೆದಿದ್ದ ಮಗುವಿನ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net