ಬ್ಯಾಡ್ಮಿಂಟನ್‌ಗೆ ಉತ್ತಮ ಪ್ರೋತ್ಸಾಹ : ಸಿಎ ಉಮೇಶ್ ರಾವ್ ಹೇಳಿಕೆ

New Project (36)
Published on

ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಮೂಡುಬಿದಿರೆಯಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಈ ಕ್ರೀಡೆ ಮೂಲಕ ರಾಷ್ಟ್ರಮಟ್ಟದ ಇನ್ನಷ್ಟು ಪ್ರತಿಭೆಗಳು ಮೂಡಿಬರಲಿ ಎಂದು ಸಿಎ ಉಮೇಶ್ ರಾವ್ ಹೇಳಿದರು.

ಆಳ್ವಾಸ್ ಬ್ಯಾಡ್ಮಿಂಟನ್ ಅಕಾಡೆಮಿ ಎಂ.ಕೆ.ಅನಂತರಾಜ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಚೊಚ್ಚಲ ಬಾರಿಗೆ ಮಕ್ಕಳಿಗಾಗಿ ಆಯೋಜಿಸಿದ್ದ ಮಾನ್ಸೂನ್ ಬ್ಯಾಡ್ಮಿಂಟನ್ ಟೂರ್ನಮೆಂಟನ್ನು ಉದ್ಘಾಟಿಸಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ ಮಾತನಾಡಿ, ಕ್ರೀಡೆ ಎಂದರೆ ಕೇವಲ ಗೆಲುವು ಅಥವಾ ಸೋಲಲ್ಲ. ಕ್ರೀಡಾ ಮನೋಭಾವದ ಬೆಳೆವಣಿಗೆ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟು ತನ್ನ ಎದುರಾಳಿಗೆ ಗೌರವ ತೋರಬೇಕು. ನಿಯಮ ಪಾಲಿಸಬೇಕು. ಫಲಿತಾಂಶವೇನು ಆದರೂ ತನ್ನ ಶ್ರೇಷ್ಠ ಪ್ರಯತ್ನ ನೀಡಬೇಕು ಎಂದರು.

ಕ್ರೀಡಾಕೂಟವು 11, 13, 15 ಮತ್ತು 17 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗಾಗಿ ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಕಿರಿಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜೇತರಿಗೆ ಟ್ರೋಫಿ, ನಗದು ಬಹುಮಾನ ನೀಡಿ ಗೌರವಿಸಲಾಯಿತು. ಆರ್‌ಎಫ್‌ಒ ಮಂಜುನಾಥ್, ಆಳ್ವಾಸ್ ಸಂಸ್ಥೆ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್, ದೈಹಿಕ ಶಿಕ್ಷಣ ನಿರ್ದೇಶಕ ಉದಯಕುಮಾರ್ ಉಪಸ್ಥಿತರಿದ್ದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net