ಜೂನ್​ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ

mansoon
Published on

ನವದೆಹಲಿ: ಮುಂಗಾರು ಮಳೆ ಮಾರುತಗಳು ಜೂನ್​ 1 ರಂದು ಕೇರಳ ಪ್ರವೇಶ ಮಾಡಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿಸಮುದ್ರದ ಅಗ್ನೇಯ ಮತ್ತು ಪೂರ್ವ ಮಧ್ಯ ಭಾಗದಲ್ಲಿ ಮೇ 31ರಿಂದ ಜೂನ್​ 4ರವರೆಗೆ ಕಡಿಮೆ ಒತ್ತಡದ ವಾತಾವರಣ ರೂಪುಗೊಳ್ಳುತ್ತದೆ. ಈ ವಾತಾವರಣ ಮುಂಗಾರು ಮಳೆ ಮಾರುತಗಳು ಕೇರಳ ಪ್ರವೇಶಕ್ಕೆ ಅನುಕೂಲವಾಗಿದ್ದು ಜೂನ್​ 1ರಂದು ಕೇರಳಕ್ಕೆ ಪ್ರವೇಶ ಪಡೆಯಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ್ಕೆ ಜೂನ್​ ಮೊದಲ ವಾರದಲ್ಲಿ ಮಾರುತಗಳು ಪ್ರವೇಶ ಮಾಡಲಿವೆ. ಮುಂಗಾರು ಮಳೆ ಮಾಲ್ಡಿವ್ಸ್​, ಅಂಡಮಾನ್​ ಮತ್ತು ನಿಕೋಬರ್​, ದಕ್ಷಿಣ ಬಂಗಾಳ ಕೊಲ್ಲಿಯನ್ನು ಆವರಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್​ ಕರಾವಳಿಯತ್ತ ಸಾಗಲಿದೆ. ಅಲ್ಲದೆ ಮುಂದಿನ 48 ಗಂಟೆಗಳಲ್ಲಿ ಮುಂಗಾರು ಮಳೆ ಮಾಲ್ಡೀವ್ಸ್​ ಪ್ರವೇಶ ಮಾಡಲಿದೆ.

ಕೇರಳದ ಕರಾವಳಿ ಪ್ರದೇಶದ ಮೀನುಗಾರರಿಗೆ ಮೇ 29ರಿಂದ ಜೂ. 4ರವರೆಗೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net