More

    ಹತ್ತೇ ನಿಮಿಷಗಳಲ್ಲಿ ಸಿಗುತ್ತೆ ಉಚಿತ ಪ್ಯಾನ್ ಕಾರ್ಡ್!

    ನವದೆಹಲಿ: ಈಗಾಗಲೇ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿರುವಂತೆ, ಆಧಾರ್ ಸಂಖ್ಯೆಯನ್ನೇ ಇ-ಕೆವೈಸಿಯಾಗಿ ಉಪಯೋಗಿಸಿಕೊಂಡು ತಕ್ಷಣವೇ ಪ್ಯಾನ್ ಕಾರ್ಡ್ ಪಡೆಯುವ ಸೌಲಭ್ಯಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಔಪಚಾರಿಕ ಚಾಲನೆ ನೀಡಿದರು.

    ಇದನ್ನೂ ಓದಿ: ಕರೊನಾ ಅಂತ್ಯಗೊಳಿಸಲು ಭಕ್ತನ ಶಿರಚ್ಛೇದ ಮಾಡಿದ ಅರ್ಚಕ!

    ಆಧಾರ್ ಸಂಖ್ಯೆ ಇರುವ ಮತ್ತು ಅದಕ್ಕೆ ಜೋಡಣೆಯಾದ ಮೊಬೈಲ್ ನಂಬರ್ ಹೊಂದಿರುವ ಎಲ್ಲ ಅರ್ಜಿದಾರರಿಗೂ ಈ ಸೌಲಭ್ಯ ಸಿಗುತ್ತದೆ. ಸಂಪೂರ್ಣ ಕಾಗದರಹಿತವಾಗಿರುವ ಈ ವ್ಯವಸ್ಥೆಯಲ್ಲಿ ಅರ್ಜಿದಾರರಿಗೆ 10 ನಿಮಿಷಗಳೊಳಗೆ ಇ-ಪ್ಯಾನ್ (ಎಲೆಕ್ಟ್ರಾನಿಕ್ ಪರ್ಮನೆಂಟ್ ಅಕೌಂಟ್ ನಂಬರ್) ಸಿಗುತ್ತದೆ.

    ಈ ವ್ಯವಸ್ಥೆಯನ್ನು ಸಚಿವೆ ಇಂದು ಔಪಚಾರಿಕವಾಗಿ ಉದ್ಘಾಟಿಸಿದರಾದರೂ ಇದರ ಬೀಟಾ ವರ್ಷನ್ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನ ಇ-ಫೈಲಿಂಗ್ ವಿಭಾಗದಲ್ಲಿ ಫೆಬ್ರವರಿಯಿಂದಲೇ ಲಭ್ಯವಿದೆ. ಆಗಿನಿಂದ ಸುಮಾರು 6.7 ಲಕ್ಷ ಜನರಿಗೆ ಇ-ಪ್ಯಾನ್ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

    ಇದನ್ನೂ ಓದಿ: ಎಲ್ಲವೂ ಮೋದಿಗಾಗಿ: 5 ಕಿ.ಮೀ ಆಟೋ ಪ್ರಯಾಣಕ್ಕೆ ಕೇವಲ ಒಂದೇ ರೂಪಾಯಿ!

    ಈ ಇನ್ಸ್‌ಟಂಟ್ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದೂ ಸುಲಭ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ. ನಿಮ್ಮ ಆಧಾರ್ ಸಂಖ್ಯೆ ಷೇರ್ ಮಾಡಿ; ಆಧಾರ್‌ನಲ್ಲಿ ನೋಂದಣಿಯಾದ ಮೊಬೈಲ್‌ಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಬರುತ್ತದೆ. ಅದನ್ನು ಸಬ್ಮಿಟ್ ಮಾಡಿ.

    ಈ ಪ್ರಕ್ರಿಯೆ ಮುಗಿದ ನಂತರ 15 ಅಂಕಿಗಳ ಅಕ್ನಾಲೆಜ್‌ಮೆಂಟ್ ಬರುತ್ತದೆ. ಅದನ್ನು ಉಪಯೋಗಿಸಿ ಇ-ಪ್ಯಾನ್ ಕಾರ್ಡ್ ಅನ್ನು ಪೋರ್ಟಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಧಾರ್ ಜತೆ ಇಮೇಲ್ ಐಡಿಯೂ ಜೋಡಣೆಯಾಗಿದ್ದರೆ, ಮೇಲ್‌ಗೂ ಇ-ಪ್ಯಾನ್ ಬರುತ್ತದೆ.

    ಪ್ರಧಾನಿ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವಕ್ಕೆ ಬಿಜೆಪಿ ಮೆಗಾ ಪ್ಲ್ಯಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts