More

    ಕರೊನಾ ಅಂತ್ಯಗೊಳಿಸಲು ಭಕ್ತನ ಶಿರಚ್ಛೇದ ಮಾಡಿದ ಅರ್ಚಕ!

    ಕಟಕ್ (ಒಡಿಶಾ): ಮನುಷ್ಯನೊಬ್ಬನನ್ನು ಬಲಿ ಕೊಡುವುದರಿಂದ ಕರೊನಾ ಅಂತ್ಯವಾಗುತ್ತದೆ ಎಂದು ನಂಬಿದ ಅರ್ಚಕ, ದೇವಸ್ಥಾನದಲ್ಲೇ ಭಕ್ತನೊಬ್ಬನ ಶಿರಚ್ಛೇದ ಮಾಡಿದ್ದಾನೆ!

    ಕಟಕ್‌ನ ನರಸಿಂಹಪುರ ಬ್ಲಾಕ್‌ನಲ್ಲಿರುವ ಬಂಧಾಹುಡಾ ಪ್ರದೇಶದಲ್ಲಿ ಬ್ರಹ್ಮಣಿ ದೇವಿಯ ದೇಗುಲ ಇದೆ. ಅಲ್ಲಿ 70 ವರ್ಷದ ಸನ್ಸಾರಿ ಓಝಾ ಎಂಬಾತ ಅರ್ಚಕನಾಗಿದ್ದಾನೆ. ದೇಶದಲ್ಲಿ ಕರೊನಾ ಹಾವಳಿಯನ್ನು ಅಂತ್ಯಗೊಳಿಸಬೇಕೆಂದರೆ ದೇವಿಗೆ ಭಕ್ತನ ಬಲಿ ಕೊಡಬೇಕು ಎಂಬುದಾಗಿ ಯಾರೋ ಕೆಲವರು ಈ ಅರ್ಚಕನಿಗೆ ಹೇಳಿದ್ದರು ಎನ್ನಲಾಗಿದೆ.

    ಇದನ್ನೂ ಓದಿ  ನಮ್ಮ ತಲೆಯನ್ನು ನಾವೇ ನೇಣಿನ ಕುಣಿಕೆಗೆ ಹಾಕಿಕೊಳ್ಳುವಷ್ಟು ನಾಚಿಕೆಯ ವಿಷಯ ಇದು…’: ಕಪಿಲ್​ ಸಿಬಲ್​

    ಬುಧವಾರ ಸಂಜೆ ಸರೋಜ್‌ಕುಮಾರ್ ಪ್ರಧಾನ್ ಎಂಬ ಭಕ್ತ ದೇವಸ್ಥಾನಕ್ಕೆ ಬಂದ. ಎಂದಿನಂತೆ ದೇವಿಯ ಎದುರು ಬಾಗಿ ನಮಸ್ಕರಿಸುತ್ತಿದ್ದ. ಈ ಅರ್ಚಕ ಹಿಂದಿನಿಂದ ಧಾವಿಸಿಬಂದು, ಕತ್ತಿಯಿಂದ ಆತನ ಕುತ್ತಿಗೆಯನ್ನು ಹಲವು ಬಾರಿ ಕಡಿದ. ಆತ ಸ್ಥಳದಲ್ಲೇ ಮೃತಪಟ್ಟ.

    ನಂತರ ಅರ್ಚಕ ಆ ರಕ್ತಸಿಕ್ತ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ತಾನೇ ಸ್ವಇಚ್ಛೆಯಿಂದ ಪೊಲೀಸ್ ಠಾಣೆಗೆ ಹೋಗಿ ಶರಣಾದ. ನಡೆದಿದ್ದೆಲ್ಲವನ್ನೂ ವಿವರಿಸಿದ. ‘ದೇವಿಯೇ ತನಗೆ ಈ ರೀತಿ ಮಾಡಲು ಆದೇಶಿಸಿದ್ದಳು’ ಎಂದೂ ಹೇಳಿದ. ಆ ವೃದ್ಧ ಅರ್ಚಕನನ್ನು ಈಗ ಪೊಲೀಸರು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

    ಜಯಲಲಿತಾ ಆಸ್ತಿ ಮೌಲ್ಯ ರೂ. 188 ಕೋಟಿಯೋ ಇಲ್ಲ ರೂ. 900 ಕೋಟಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts