

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಸ್ತಿ ಮೌಲ್ಯದ ಪಟ್ಟಿಯನ್ನು ಆಸ್ತಿಯ ಹಕ್ಕುದಾರರಾಗಿರುವ ಸೋದರಳಿಯ ಜೆ. ದೀಪಕ್ ಮತ್ತು ಸೋಸದರ ಸೊಸೆ ಜೆ. ದೀಪಾ ಮದ್ರಾಸ್ ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಒಟ್ಟು ಆಸ್ತಿ ಮೌಲ್ಯ 188 ಕೋಟಿ ರೂಪಾಯಿ ಎಂದು ನಮೂದಿಸಲಾಗಿದೆ. ವಾದದ ವೇಳೆ 913 ಕೋಟಿ ರೂಪಾಯಿ ಎಂದು ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. ಜಯಲಲಿತಾ ಅವರು ಬದುಕಿದ್ದಾಗ ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಬಿಂಬಿತವಾಗಿತ್ತು. ಆದರೆ ಕಾನೂನು ಪ್ರಕಾರ ಇಬ್ಬರಿಗೆ 188 ಕೋಟಿ ರೂಪಾಯಿ ಆಸ್ತಿ ದೊರೆಯಲಿದೆ.
ಜಯಲಲಿತಾ ಅವರು 1991ರಿಂದ 1996ರ ನಡುವೆ ಖರೀದಿಸಿದ 25 ಆಸ್ತಿಗಳನ್ನು ಮಾತ್ರ ಲೆಕ್ಕಚಾರ ಮಾಡಲಾಗಿದೆ. ಉಳಿದ ಆಸ್ತಿಗಳು ಬೇನಾಮಿ ಹೆಸರಿನಲ್ಲಿ ಇರುವುದರಿಂದ ಅವುಗಳ ಒಡೆತನ ಇವರಿಗೆ ಸಿಕ್ಕಿಲ್ಲ.
ಜಯಲಲಿತಾ ಅವರ ಹೆಸರಿನಲ್ಲಿ ಒಟ್ಟು 173 ಆಸ್ತಿಗಳಿವೆ. ಇವುಗಳಲ್ಲಿ 100 ಆಸ್ತಿಗಳು ಜಯಲಲಿತಾ ಅವರ ಹೆಸರಿನಲ್ಲಿವೆ. 100 ಆಸ್ತಿಗಳು ಜಯಲಲಿತಾ ಅವರ ಹೆಸರಿನಲ್ಲಿದ್ದರೂ ಎಲ್ಲ ಆಸ್ತಿಗಳು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸದ್ಯಕ್ಕೆ ಸಿಗುವುದು ಕಷ್ಟವಾಗಿದೆ.
173 ಆಸ್ತಿಗಳ ಪಟ್ಟಿಯಲ್ಲಿ, ಜಯಲಲಿತಾ ಅವರ ಹೆಸರಿನ ಅಂಕಿಅಂಶಗಳು ಕನಿಷ್ಠ 100 ರ ಶೀರ್ಷಿಕೆ ಪತ್ರಗಳಲ್ಲಿವೆ, ಮತ್ತು ಆಕೆಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಇದು ಸುಲಭವಲ್ಲ.
ಜಯಲಲಿತಾ 2011 ರ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 51.4 ಕೋಟಿ ರೂ. ಮೌಲ್ಯದ ಆಸ್ತಿಯ ವಿವರ ದಾಖಲಿಸಿದ್ದರು. ನಂತರ 2016 ರ ಏಪ್ರಿಲ್‌ನಲ್ಲಿ ಅವರು ಸಲ್ಲಿಸಿದ ಕೊನೆಯ ಪ್ರಮಾಣ ಪತ್ರದಲ್ಲಿ 113.73 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವರ ನೀಡಿದ್ದರು.
ಕೊಡೈಕೆನಾಲ್ನಲ್ಲಿ 1992 ಖರೀದಿಸಿರುವ 900 ಎಕರೆ ಟೀ ಎಸ್ಟೇಟ್ ಕಾಗದ ಪತ್ರದಲ್ಲಿ ನಿಖರವಾದ ವಾರಸುದಾರರ ಹೆಸರು ಇಲ್ಲ. ಹೀಗಾಗಿ ಈ ಆಸ್ತಿ ಕೂಡ ಯಾರಿಗೆ ಸಿಗಲಿದೆ ಎನ್ನುವ ಗೊಂದಲ ಇದೆ. (ಏಜೆನ್ಸೀಸ್)