ಕೋತಿ ಎಂದು ಬೀಳ್ಗಳೆಯದಿರಿ..ಕಪಿರಾಯ ಮಾಡಿದ ಕೆಲಸ ನೋಡಿದ್ರೆ ಸೆಲ್ಯೂಟ್​ ಹೊಡೆಯದೆ ಇರಲಾರಿರಿ!

1 Min Read
ಕೋತಿ ಎಂದು ಬೀಳ್ಗಳೆಯದಿರಿ..ಕಪಿರಾಯ ಮಾಡಿದ ಕೆಲಸ ನೋಡಿದ್ರೆ ಸೆಲ್ಯೂಟ್​ ಹೊಡೆಯದೆ ಇರಲಾರಿರಿ!

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಅದ್ಭುತಗಳನ್ನು ಸೃಷ್ಟಿಸಿರುವ ಮಾನವ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸುತ್ತಾನೆ. ಆ ನಿರ್ಲಕ್ಷ್ಯವು ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ನೀರು ಪೋಲು ಮಾಡಿ ಈಗ ಗುಟುಕು ನೀರಿಗೂ ಪರದಾಡುತ್ತಿರುವುದು. ಆದರೆ ಇಲ್ಲೊಂದು ಕೋತಿ ‘ನೀರು ವ್ಯರ್ಥ ಮಾಡಬಾರದು’ ಎಂಬ ಸಂದೇಶ ಸಾರಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವೀಡಿಯೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅಯೋಧ್ಯೆ, ಕಾಶಿ ಪ್ರವಾಸದ ಹೆಸರಲ್ಲಿ ವಂಚನೆ

ಜೀವಜಲ ಉಳಿಸುವ ಕುರಿತು ಶಾಲಾ ಹಂತದಿಂದಲೂ ಮಕ್ಕಳಿಗೆ ತಿಳಿವಳಿಕೆ ನೀಡಲಾಗುತ್ತದೆ. ಆದರೆ ನಿಜ ಜೀವನದಲ್ಲಿ ಎಷ್ಟೋ ಲೀಟರ್ ನೀರು ನಮ್ಮ ಕಣ್ಣೆದುರೇ ವ್ಯರ್ಥವಾಗುತ್ತಿದ್ದರೂ ಕಣ್ಣುಮುಚ್ಚಿಕುಳಿತಿರುತ್ತೇವೆ. ಆದರೆ ನೀರು ಉಳಿಸಲು ಮಂಗವೊಂದು ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆ ವಿಡಿಯೋದಲ್ಲಿ.. ಕೋತಿಗೆ ಬಾಯಾರಿಕೆಯಾಗಿದೆ. ನಲ್ಲಿಯಿಂದ ನೀರು ಬರುತ್ತಿರುವುದನ್ನು ಗಮನಿಸಿದ ಅದು ಟ್ಯಾಪ್ ಆನ್ ಮಾಡಿ ನೀರು ಕುಡಿದಿದೆ. ಬಾಯಾರಿಕೆ ನೀಗಿದಾಗ ನಲ್ಲಿ ಯಿಂದ ಬರುತ್ತಿದ್ದ ನೀರು ನಿಲ್ಲಿಸಿ ಅದು ದೃಢಪಟ್ಟ ನಂತರ ಮುಂದೆ ಹೋಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಶಹಬ್ಬಾಷ್ ವಾನರಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ನೀರಿಲ್ಲದೆ ಭವಿಷ್ಯವಿಲ್ಲ ಎಂಬುದನ್ನು ಮಂಗ ಅರಿತುಕೊಂಡಿದೆ. ಆದರೆ ನಾವಿನ್ನೂ ಪೋಲು ಮಾಡುವುದರಲ್ಲೇ ನಿರತರಾಗಿದ್ದೇವೆ. ಮೂಕ ಜೀವಿ ಉತ್ತಮ ಸಂದೇಶ ನೀಡಿರುವುದು ನಿಸರ್ಗ ಪ್ರೇಮಿಗಳಿಗೆ ಸಂತಸ ತಂದಿದೆ. ನೀರನ್ನು ಪೋಲು ಮಾಡದೆ ಎಲ್ಲರೂ ಸಂರಕ್ಷಿಸಬೇಕು ಎಂದು ಹಲವರು ಸಲಹೆ ನೀಡುತ್ತಿದ್ದಾರೆ.
ಕಪಿಚೇಷ್ಟೆ ಎಂದು ಬೀಳ್ಗಳೆಯುವವರಿಗೆ ಈ ಕಪಿರಾಯನ ಸಂದೇಶ ಜೀವಜಲ ಸಂರಕ್ಷಣೆಯ ಪಾಠ ಕಲಿಸಿದೆ ಎಂದರೆ ತಪ್ಪಾಗಲಾರದು.

‘ರಾಹುಲ್ ಪ್ರಧಾನಿ ಅಭ್ಯರ್ಥಿ’..ಅಖಿಲೇಶ್ ಯಾದವ್ ಸ್ಪಷ್ಟನೆ..!

See also  ಕಾಲುವೆಗಳಿಗೆ ಕೂಡಲೇ ನೀರು ಹರಿಸಿ: ಬಿಜೆಪಿ ರೈತ ಮೋರ್ಚಾ ಮುಖಂಡರ ಆಗ್ರಹ
Share This Article