ಪ್ರಧಾನಿ ಮೋದಿ ಸಮಾಜದ ವಿಷ ಕುಡಿಯುವ ನೀಲಕಂಠ: ಹುಮ್ನಾಬಾದ್​ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ!

cm bommai
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಕಣದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಬ್ಬರವಿರಲಿದೆ. ಒಂದೇ ದಿನ ಮೂರು ಕಡೆಗಳಲ್ಲಿ ಸಾರ್ವಜನಿಕ ಸಭೆ ಹಾಗೂ ರಾಜಧಾನಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಇಂದು ಬಸವನಾಡು ಬೀದರ್ ನಿಂದಲ್ಲೇ ರಾಜ್ಯದ ಸಾರ್ವತ್ರಿಕ ಚುನಾವಣಾ ಅಖಾಡಕ್ಕೆ ನಮೋ ಎಂಟ್ರಿಯಾಗಿದ್ದು ಮೊದಲ ಹಂತವಾಗಿ ಇಂದು ಬಸವಣ್ಣನ ಕರ್ಮ ಭೂಮಿಯಿಂದಲೇ ಮೋದಿ ಕೇಸರಿ ಕಹಳೆಯನ್ನು ಮೊಳಗಿಸಲಿದ್ದಾರೆ.

ಇಂದು ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ಗೆ ಮೋದಿ ಪ್ರಯಾಣ ಬೆಳೆಸಿದ್ದು 10:20ಕ್ಕೆ ಬೀದರ್ ಏರಬೇಸ್​ಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಹೆಲಿಪ್ಯಾಡ್​ಗೆ‌ ಮೋದಿ ಪ್ರಯಾಣಿಸಿದ್ದಾರೆ.

ಈ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, "ವಿಶ್ವಮಾನವ, ವಿಶ್ವ ಬಂಧು ಬಸವಣ್ಣನ ನಾಡಿನಲ್ಲಿ ಆಧುನಿಕ ವಿಶ್ವನಾಯಕ ಮೋದಿಯವರಿಗೆ ಸ್ವಾಗತಿಸುತ್ತಿದ್ದೇನೆ. ವಿಶ್ವದ ಮೊದಲ ಪ್ರಜಾಪ್ರಭುತ್ವದ ಮೊದ ಸಂಕೇತ ಇದ್ದರೆ ಅದು ಅನುಭವ ಮಂಟಪ. ಇದನ್ನು ಗುರುತಿಸಿದವರು ಪ್ರಧಾನಿ ಮೋದಿಯವರು. ಪ್ರಜಾಪ್ರಭುತ್ವ ಎಂದರೆ ಸಮಾನತೆ, ಎಲ್ಲರನ್ನೂ ಸರಿಸಮಾನವಾಗಿ ನೋಡುವಂತಹದ್ದು. ಇದನ್ನು ಕಾಂಗ್ರೆಸ್ ಮಾಡುತ್ತಿಲ್ಲ. ನಾವು ದೀನ ದಲಿತರಿಗೆ ವಿಶೇಷ ಕಾರ್ಯಕ್ರಮಗಳ ಮೂಲಕ ನಾವು ಸಮಾನತೆಯ ಅನುಭವ ನೀಡಿದ್ದೇವೆ.

ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಗೆ, ಬೀದರ್​ಗೆ, ಕಲಬುರ್ಗಿಗೆ ಹೊಸ ಟೆಕ್ಸ್​ಟೈಲ್​ ಪಾರ್ಕ್​ಅನ್ನು ಪ್ರಧಾನಿ ಮೋದಿಯ ನೇತೃತ್ವದಲ್ಲಿ ನಡೆದಿದ್ದು ಒಂದು ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಈ ನಡುವೆಯೂ ಕಾಂಗ್ರೆಸ್, ಲಿಂಗಾಯತ ನಾಯಕರು ಭ್ರಷ್ಟ ನಾಯಕರು ಎನ್ನುತ್ತಾರೆ" ಎಂದಿದ್ದಾರೆ.

ಈ ಸಂದರ್ಭ ಖರ್ಗೆ ನೀಡಿದ್ದ "ವಿಷ" ಹೇಳಿಕೆಯನ್ನು ನೆನಪಿಸಿ, "ಸಮಾಜದ ವಿಷವನ್ನು ಕುಡಿದು ಸಮಾಜ ಸೇವೆ ಮಾಡಿದವರಿದ್ದರೆ ಅದು ಪ್ರಧಾನಿ ಮೋದಿ" ಎಂದು ಹೇಳಿ ಕಾಲೆಳೆದಿದ್ದಾರೆ. ಈ ಮೂಲಕ ಕಾಂಗ್ರೆಸ್​ಗೆ ತಿರುಗೇಟನ್ನೂ ಈ ಸಂದರ್ಭ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net