More

    ಸುಡಾನ್​ನಿಂದ ಬಂದವರಲ್ಲಿ ಹಳದಿ ಜ್ವರ? ಲಸಿಕೆ ಪಡೆಯದೇ ಬಂದ 45 ಜನರ ಕ್ವಾರಂಟೈನ್

    ಬೆಂಗಳೂರು: ಸುಡಾನ್​ ದೇಶದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧದಲ್ಲಿ ಸಿಲುಕಿದ್ದವರನ್ನು ಭಾರತಕ್ಕೆ ಆಪರೇಷನ್​ ಕಾವೇರಿಯ ಅಡಿಯಲ್ಲಿ ರಕ್ಷಿಸಿ ಕರೆತೆರಲಾಗಿದೆ. ಆದರೆ ಅಲ್ಲಿಂದ ಬಂದವರಲ್ಲಿ ಹಳದಿ ಜ್ವರಕ್ಕೆ ಲಸಿಕೆ ಪಡೆದ ಪ್ರಮಾಣಪತ್ರ ಇಲ್ಲದಿದ್ದರಿಂದ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಸುಡಾನ್​ನಿಂದ ಬಂದವರಿಂದಾಗಿ ಹಳದಿ ಜ್ವರ ರಾಜಧಾನಿಗೆ ಹರಡುವ ಭೀತಿ ಇತ್ತು. ಯಲ್ಲೋ ಫೀವರ್​ಗೆ ವ್ಯಾಕ್ಸಿನ್ ಪಡೆಯದೇ ಅಂತರ್ಯುದ್ಧದಲ್ಲಿ ಸಿಲುಕಿದ್ದವರು ರಾಜಧಾನಿಗೆ ಪ್ರವೇಶಿಸಿದ್ದರಿಂದ ಈ ಭೀತಿ ಎದುರಾಗಿದೆ.ಒಟ್ಟು ಲಸಿಕೆ ಪಡೆಯದೇ ಬಂದವರು 45 ಮಂದಿ ಇದ್ದು ಅವರನ್ನು 4 ದಿನಗಳ ಕಾಲ ಆರೋಗ್ಯ ಇಲಾಖೆ ಕ್ವಾರಂಟೈನ್​ಗೆ ಒಳಪಡಿಸಿದೆ.

    ದಕ್ಷಿಣ ಆಫ್ರಿಕಾ, ದಕ್ಷಿಣಾ ಅಮೆರಿಕಾ, ಉಗಾಂಡ, ನೈಜಿರಿಯಾ, ಕೀನ್ಯಾ ಸೇರಿ ಕೆಲ ಭಾಗಗಳಲ್ಲಿ ಹಳದಿ ಜ್ವರ ಹರಡಿದ್ದು ಇದೊಂದು ಭೀಕರ ಕಾಯಿಲೆಯಾಗಿದೆ. ಆಪರೇಷನ್ ಕಾವೇರಿ ಕಾರ್ಯಚರಣೆ ಅಡಿ ನಿನ್ನೆ ರಾಜಧಾನಿಗೆ 362 ಮಂದಿ ಆಗಮಿಸಿದ್ದಾರೆ. ಈ ಪೈಕಿ 45 ಮಂದಿ ಬಳಿ ಹಳದಿ ಜ್ವರದ ಲಸಿಕೆ ಪ್ರಮಾಣ ಪತ್ರ ಇಲ್ಲ. ಸದ್ಯ ಅಷ್ಟೂ ಮಂದಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts