More

    ಕಾಂಪೋಸ್ಟ್ ಅಭಿವೃದ್ಧಿ ಘಟಕಕ್ಕೆ ಬೀಗ; ಸ್ಥಳೀಯ ನಿವಾಸಿಗಳ ಹೋರಾಟಕ್ಕೆ ಜಯ | ಶಾಸಕ ಸತೀಶ್ ರೆಡ್ಡಿ ಸಂತಸ

    ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯ ಬಳಿಯ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಘಟಕದ ಕದ ಕೊನೆಗೂ ಮುಚ್ಚಿದೆ.

    ಸ್ಥಳೀಯ ಶಾಸಕ ಸತೀಶ್ ರೆಡ್ಡಿ ನಿರಂತರ ಪ್ರಯತ್ನದಿಂದ ಘಟಕವನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ. ಬೆಂಗಳೂರು ನಗರದ 198 ವಾರ್ಡ್​ಗಳಲ್ಲಿ ಉತ್ಪತ್ತಿಯಾಗುತ್ತಿದ್ದ ಕಸ ಮತ್ತು ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಮರುಬಳಕೆ ಮಾಡುವ ಸಲುವಾಗಿ ಘಟಕವನ್ನು ನಿರ್ವಿುಸಲಾಗಿತ್ತು. ಆದರೆ ದಿನಕಳೆದಂತೆ ಕೆಸಿಡಿಸಿಯಲ್ಲಿನ ಬೆಟ್ಟದಂತಹ ಕಸದ ರಾಶಿಯಿಂದ ಹೊರಬರುತ್ತಿದ್ದ ದುರ್ವಾಸನೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಹೈರಾಣಾಗಿದ್ದರು. ಕೆಟ್ಟ ವಾಸನೆಯಿಂದಾಗಿ ಎಚ್​ಎಸ್​ಆರ್ ಬಡಾವಣೆ, ಸೋಮಸುಂದರಪಾಳ್ಯ, ಹೊಸಪಾಳ್ಯ ಸುತ್ತಮುತ್ತಲಿನ ಜನವಸತಿ ಪ್ರದೇಶದ ವಾಸಿಗಳು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇಷ್ಟಾದರೂ ಕೆಸಿಡಿಸಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಘಟಕವನ್ನು ಬಂದ್ ಮಾಡುವಂತೆ ಒತ್ತಾಯಿಸಿ ಪದೇಪದೆ ಪ್ರತಿಭಟನೆ ನಡೆಸಿದ್ದರು. ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಘಟಕವನ್ನು ಬಂದ್ ಮಾಡಿಸುವ ಭರವಸೆ ನೀಡಿದ್ದರು. ಆ ಯತ್ನದಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

    ಕೆಸಿಡಿಸಿ ಘಟಕ ಬಂದ್ ಮಾಡುವಂತೆ ನಿರಂತರವಾಗಿ ಹೋರಾಟ ಮಾಡುತ್ತ ಬರಲಾಗಿತ್ತು. ಅದರ ಫಲವಾಗಿ ಇದೀಗ ಘಟಕ ಬಂದ್ ಮಾಡಲಾಗಿದೆ. ದುರ್ವಾಸನೆ ಬರದಂತೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತ ಮಾತಿಗೆ ತಪ್ಪಿದ್ದರು. ಜತೆಗೆ ಕೋರ್ಟ್​ಗೆ ತಪ್ಪು ಮಾಹಿತಿ ನೀಡಿದ್ದರು.
    | ಸತೀಶ್ ರೆಡ್ಡಿ ಬೊಮ್ಮನಹಳ್ಳಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts