ಮೊಬೈಲ್ ನಿಮ್ಮ ದೇಹವನ್ನೇ ಬದಲಾಯಿಸುತ್ತೆ: ತನ್ನ ಸ್ಥಿತಿಯನ್ನು ಕ್ಯಾಮೆರಾ ಮುಂದೆ ತೋರಿದ ನಟ ಮಾಧವನ್! Actor Madhavan

Actor Madhavan

Actor Madhavan : ಪ್ರಸ್ತುತ ಯುಗದಲ್ಲಿ ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆಯು ಜನರಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟು ಮಾಡುತ್ತಿದೆ. ಆಘಾತಕಾರಿ ಸಂಗತಿ ಏನೆಂದರೆ, ವೈಯಕ್ತಿಕ ಸಂಬಂಧಗಳನ್ನು ಸಹ ಹಾಳುಮಾಡುತ್ತಿವೆ. ಇನ್ನು ಕೂತರು, ನಿಂತರು ಹಾಗೂ ಮಲಗಿದರೂ ಬಹುತೇಕ ಮಂದಿಗೆ ಮೊಬೈಲ್​​ ಬೇಕೇ ಬೇಕು. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್​ ಕೈಯಲ್ಲಿ ಹಿಡಿದಿರಲೇ ಬೇಕು. ಮೊಬೈಲ್​ ಇಲ್ಲದಿದ್ದರೆ ಕೈಕಾಲುಗಳೇ ಓಡುವುದಿಲ್ಲ, ಏನೋ ಕಳೆದುಕೊಂಡಂತೆ ಚಡಿಪಡಿಸುತ್ತೇವೆ ಎಂದು ಹೇಳುವ ಅನೇಕ ಮಂದಿ ಇದಾರೆ.

blank

ಐದು ನಿಮಿಷ ಸಮಯ ಸಿಕ್ಕರೆ ಸಾಕು ನಿಮ್ಮ ಕಣ್ಣುಗಳು ಮೊದಲು ಹೋಗುವುದು ಫೋನ್ ಕಡೆಗೆ. ರೀಲ್ಸ್​, ಶಾರ್ಟ್ಸ್​ ಇತ್ಯಾದಿಗಳನ್ನು ನೋಡುತ್ತಾ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಅನೇಕ ಜನರು ಫೋನ್ ಇಲ್ಲದೆ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ. ಮಾನವರನ್ನು ಸಂಪೂರ್ಣ ಆವರಿಸಿಕೊಂಡಿರುವ ಮೊಬೈಲ್​ ಫೋನ್​, ಎಷ್ಟೊಂದು ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ಇತ್ತೀಚೆಗೆ, ನಟ ಆರ್. ಮಾಧವನ್ ಒಂದು ಸೆಮಿನಾರ್‌ನಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಕಿರು ಬೆರಳುಗಳನ್ನು ಹೀಗೆ ಎತ್ತಿ ಹಿಡಿಯಲು ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುತ್ತೇನೆ. ಫೋನ್ ಬಳಸದ ಕೈಯಲ್ಲಿರುವ ಕಿರುಬೆರಳುಗಳನ್ನು ಪಕ್ಕೆಲುಬಿನ ಉದ್ದಕ್ಕೂ ಸವರಿ ನೋಡಿ, ಬಳಿಕ ಅದೇ ರೀತಿ ನೀವು ಫೋನ್​ ಬಳಸುವ ಕೈಯಲ್ಲಿರುವ ಕಿರು ಬೆರಳನ್ನು ಸವರಿ ನೋಡಿ, ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ. ಪೋನ್​ ಬಳಸಿದ ಕೈನ ಕಿರುಬೆರಳು ಓರೆಯಾಗಿರುವಂತೆ ಮತ್ತು ಹಳ್ಳ ಬಿದ್ದಿರುವಂತೆ ಭಾಸವಾಗುತ್ತದೆ. ನಾನು ನಿಮಗೆ ಹೇಳುತ್ತಿದ್ದೇನೆ ನಾವೆಲ್ಲರೂ ಮೊಬೈಲ್ ಫೋನ್ ಫಿಂಗರ್​ ಸಮಸ್ಯೆಗಳನ್ನು ಹೊಂದಿದ್ದೇವೆ ಎಂದು ಮಾಧವನ್​ ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಶಾಕ್​: ಏಷ್ಯಾ ಕಪ್​ ಆಡದಿರಲು, ಆಯೋಜಿಸದಿರಲು ಭಾರತ ನಿರ್ಧಾರ! Asia Cup 2025

ಮೊಬೈಲ್ ಫೋನ್‌ಗಳು ನಮ್ಮ ದೇಹವನ್ನೇ ಬದಲಾಯಿಸಬಹುದು. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದಾಗಿ ಮೊಬೈಲ್ ಫೋನ್ ಫಿಂಗರ್ಸ್​ ಎಂಬ ಅನಾರೋಗ್ಯ ಸ್ಥಿತಿಯು ನನಗೆ ಬಂದಿದೆ ಎಂದು ಇದೇ ಸಂದರ್ಭದಲ್ಲಿ ಮಾಧವನ್ ಹೇಳಿದರು. ಅಲ್ಲದೆ, ತಮ್ಮ ಕೈ ಬೆರಳುಗಳನ್ನು ತೋರಿಸಿದರು.

ಏನಿದು ಮೊಬೈಲ್​ ಫೋನ್​ ಫಿಂಗರ್ಸ್​?

ಮೊಬೈಲ್ ಫೋನ್ ಫಿಂಗರ್ಸ್​ ಎಂಬುದು ಮೊಬೈಲ್ ಫೋನ್‌ಗಳ ದೀರ್ಘಕಾಲದ ಬಳಕೆಯಿಂದ ಬೆರಳುಗಳಲ್ಲಿ ಉಂಟಾಗುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ಬೆರಳುಗಳಲ್ಲಿ ಮರಗಟ್ಟುವಿಕೆ, ಬಿಗಿತ ಮತ್ತು ಸ್ನಾಯು ಸೆಳೆತ. ಈ ಸ್ಥಿತಿಯು ನಿರಂತರವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೋಲ್ ಮಾಡುವುದು, ಸ್ಪರ್ಶಿಸುವುದು ಮತ್ತು ಟೈಪ್ ಮಾಡುವುದರಿಂದ ಉಂಟಾಗುತ್ತದೆ, ಜೊತೆಗೆ ಫೋನ್ ಅನ್ನು ನಿಮ್ಮ ಕೈಯಲ್ಲಿ ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದರಿಂದ ಉಂಟಾಗುತ್ತದೆ.

ಪರಿಹಾರವೇನು?

ಇದಕ್ಕೆ ಮುಖ್ಯ ಪರಿಹಾರವೆಂದರೆ ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡುವುದು. ಸಾಧ್ಯವಾದಾಗಲೆಲ್ಲ ಫೋನ್ ಬಳಸುವುದನ್ನು ತಪ್ಪಿಸಲು ಪ್ರಯತ್ನಿಸಿ. ವಿಡಿಯೋಗಳನ್ನು ನೋಡುವುದು ಮತ್ತು ಓದುವುದು ಮುಂತಾದ ವಿಷಯಗಳಿಗೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ. ಇದು ನಿಮ್ಮ ಬೆರಳುಗಳ ಮೇಲಿನ ‘ಕೆಲಸದ ಹೊರೆ’ಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮೊಬೈಲ್ ಫೋನ್ ಬಳಸುವಾಗ ಎರಡೂ ಕೈಗಳಿಂದ ಹಿಡಿದುಕೊಳ್ಳುವುದು ಉತ್ತಮ. ಪರ್ಯಾಯವಾಗಿ, ನೀವು ಮೊಬೈಲ್ ಫೋನ್ ಹೋಲ್ಡರ್‌ಗಳು ಅಥವಾ ಬೆಲ್ಟ್‌ಗಳನ್ನು ಬಳಸಬಹುದು. ನಿಮ್ಮ ಫೋನ್ ಬಳಸುವಾಗ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ. (ಏಜೆನ್ಸೀಸ್​)

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್​: ಏಷ್ಯಾ ಕಪ್​ ಆಡದಿರಲು, ಆಯೋಜಿಸದಿರಲು ಭಾರತ ನಿರ್ಧಾರ! Asia Cup 2025

ಮೇ 8ರಂದು ಪಾಕ್​ನಿಂದ ಟಾರ್ಗೆಟ್​ ಆಗಿತ್ತು ಗೋಲ್ಡನ್​ ಟೆಂಪಲ್: ಭಾರತೀಯ ಸೇನೆ ರಕ್ಷಿಸಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ… Golden Temple

Share This Article
blank

ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ನಿಲ್ಲಲು ಸಾಧ್ಯವಿಲ್ಲ! Chanakya Niti

Chanakya Niti : ಆಚಾರ್ಯ ಚಾಣಕ್ಯ ರಾಜಕೀಯ, ಸಮಾಜ, ಸಂಬಂಧಗಳು ಮತ್ತು ಜೀವನದ ಸೂಕ್ಷ್ಮ ವ್ಯತ್ಯಾಸಗಳನ್ನು…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸಾಕು! ಈ ಎಲ್ಲಾ ಲಾಭಗಳು ನಿಮ್ಮದಾಗುತ್ತದೆ… cumin water

cumin water: ಜೀರಿಗೆಯ ಬಳಕೆಯು ಆರೋಗ್ಯ ಪ್ರಯೋಜನಗಳ ದೃಷ್ಟಿಯಿಂದಲೂ ತುಂಬಾ ಉಪಯುಕ್ತವಾಗಿದೆ.  ಪ್ರತಿದಿನ ಜೀರಿಗೆ ನೀರನ್ನು…

blank