

ಕೋಟ: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಪಂ ವ್ಯಾಪ್ತಿಯ ಕೋಡಿ ಹೊಸಬೇಂಗ್ರೆ ಸಹಿತ ವಿವಿಧ ಕಡಲ್ಕೊರೆತ ಸ್ಥಳಗಳಿಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ, ಕಡಲ್ಕೊರೆತ ಸ್ಥಳಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ಮಾಹಿತಿ ನೀಡಿದ ಶಾಸಕರು ಎಲ್ಲೆಲ್ಲಿ ಕಡಲ್ಕೊರೆತ ನಡೆದಿದೆ ಆ ಸ್ಥಳಗಳ ಬಗ್ಗೆ ಸರ್ಕಾರದ ಸಚಿವರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ವಿವರಿಸಿದರು. ಕೋಡಿ ಗ್ರಾಪಂ ವ್ಯಾಪ್ತಿಯ ಕಡಲಕಿನಾರೆಯಲ್ಲಿ ತಲೆ ಎತ್ತಿದ ರೆಸಾರ್ಟ್ಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಕಿನಾರೆಯ ರಸ್ತೆಯ ಅಂಚಿನಲ್ಲಿ ಕಾಂಪೌಂಡ್ ನಿರ್ಮಾಣದ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿದರು. ಕಳೆದ ವರ್ಷ ಇದೇ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭ ಇಲ್ಲಿನ ಎಲ್ಲ ರೆಸಾರ್ಟ್ಗಳ ಬಗ್ಗೆ ಮಾಹಿತಿ ಪಡೆದು ಸ್ಥಳೀಯಾಡಳಿತಕ್ಕೆ ಎಚ್ಚರಿಕೆ ಪಾಠ ಮಾಡಿದ್ದು ನೆನಪಿಸಬಹುದಾಗಿದೆ.
ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಕಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ ಪಿ., ಸತೀಶ್ ಜಿ.ಕುಂದರ್, ಮೀನುಗಾರ ಮುಖಂಡರಾದ ಲಕ್ಷ್ಮಣ್ ಸುವರ್ಣ, ಮಹಾಬಲ ಕುಂದರ್, ಸುಧೀರ್ ಕುಂದರ್, ರಾಘವೇಂದ್ರ ಸುವರ್ಣ, ಮಾಜಿ ಉಪಾಧ್ಯಕ್ಷ ಅಣ್ಣಪ್ಪಕುಂದರ್, ಮೀನುಗಾರಿಕಾ ಇಲಾಖೆ ಸಹಾಯಕ ಇಂಜಿನಿಯರ್ ಡಯಾಸ್, ಭಾನುಪ್ರಕಾಶ ಉಪಸ್ಥಿತರಿದ್ದರು.