ಮರ ಕಡಿದ ಗುತ್ತಿಗೆದಾರನಿಗೆ 25 ಸಾವಿರ ರೂ. ದಂಡ

UDP-2-11-TreeCutting
ಉಡುಪಿಯ ಭುಜಂಗ ಪಾರ್ಕ್​ನಲ್ಲಿ ಮರ ಕಡಿದ ಗುತ್ತಿಗೆದಾರನನ್ನು ಪೌರಾಯುಕ್ತ ರಾಯಪ್ಪ ತರಾಟೆಗೆ ತೆಗೆದುಕೊಂಡರು. ಪರಿಸರ ಇಂಜಿನಿಯರ್​ ಸ್ನೇಹಾ ಹಾಗೂ ಇತರರಿದ್ದರು.
Published on

ಉಡುಪಿ ನಗರಸಭೆ ಪೌರಾಯುಕ್ತರಿಂದ ಕ್ರಮ | ತಲಾ 10 ಗಿಡ ನೆಡಲು ಆದೇಶ

ವಿಜಯವಾಣಿ ಸುದ್ದಿಜಾಲ ಉಡುಪಿ
ನಗರಸಭೆಯ ಅನುಮತಿ ಇಲ್ಲದೆ ಉಡುಪಿ ನಗರದ ಭುಜಂಗ ಪಾರ್ಕ್​ನಲ್ಲಿದ್ದ ನಾಲ್ಕೈದು ಮರ ಕಡಿದ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಪೌರಾಯುಕ್ತ ರಾಯಪ್ಪ ಅವರು ಮಂಗಳವಾರ 25 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪಾರ್ಕ್​ನಲ್ಲಿ ಅಪಾಯಕಾರಿಯಾಗಿದೆ ಎಂದು ಬೆಳೆದು ನಿಂತಿದ್ದ ಮರಗಳನ್ನು ಪಾರ್ಕ್​ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್​ ಎಂಬವರ ಸೂಚನೆಯಂತೆ ಕಾರ್ಮಿಕರು ಕಡಿಯುತ್ತಿದ್ದರು. ಇದನ್ನು ಕಂಡ ಪಾರ್ಕ್​ನಲ್ಲಿ ವಿಹರಿಸುತ್ತಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.

UDP-2-11A-TreeCutting
ಪಾರ್ಕ್​ನಲ್ಲಿದ್ದ ಮರ ಕಟಾವು ಮಾಡಿರುವುದು.

ಪೌರಾಯುಕ್ತರಿಂದ ತರಾಟೆ

ಜನರ ವಿರೋಧದ ನಡುವೆಯೂ ಕಾರ್ಮಿಕರು ನಾಲ್ಕೈದು ಮರಗಳನ್ನು ಕಡಿದು ಉರುಳಿಸಿದ್ದರು. ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ, ಮರ ಕಡಿಯುವುದನ್ನು ತಡೆಹಿಡಿದರು. ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೆ ಮರ ಕಡಿದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಒಂದು ಮರದ ಬದಲು 10 ಗಿಡ ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದರು.

ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್​ ಸ್ನೇಹಾ ಕೆ.ಎಸ್​. ಇದ್ದರು. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net