ಬಂಧನದ ಬೆನ್ನಿಗೇ ಮಾಡಾಳ್​ಗೆ ಎದೆನೋವು!; 'ನಾನು ಹಾರ್ಟ್ ಪೇಷಂಟ್, ಎದೆನೋವು ಬರ್ತಿದೆ' ಎನ್ನುತ್ತಿರುವ ಶಾಸಕ

MLA Madal Virupakshappa
Published on

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಆದರೆ ಇಲ್ಲಿಗೆ ಬರುತ್ತಿದ್ದಂತೆ ಮಾಡಾಳ್ ಹೈಡ್ರಾಮಾ ಶುರುವಾಗಿದೆ ಎನ್ನಲಾಗಿದೆ.

ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬೌರಿಂಗ್ ಆಸ್ಪತ್ರೆ ಬಳಿಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು 'ನನಗೆ ಎದೆನೋವು' ಎಂದು ಹೇಳಲಾರಂಭಿಸಿದ್ದಾರೆ. 'ನಾನು ಹಾರ್ಟ್​ಪೇಷಂಟ್, ನನಗೆ ಎದೆನೋವು ಬರುತ್ತಿದೆ' ಎಂದು ಮಾಡಾಳ್ ವರಾತ ತೆಗೆದಿದ್ದಾರೆ.

ಮಾಡಾಳ್ ಅವರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಬೇಕೋ ಬೇಡವೋ ಎಂದು ಲೋಕಾಯುಕ್ತ ಪೊಲೀಸರು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಂತರ ವೈದ್ಯರ ಸಲಹೆ ಮೇರೆಗೆ ಆ ಬಗ್ಗೆ ಲೋಕಾಯುಕ್ತ ಪೊಲೀಸರು ನಿರ್ಧರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net